ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳಪೆ ಕಾಮಗಾರಿ

ಕಲಘಟಗಿ ಪಟ್ಟಣದಲ್ಲಿ ಸುಮಾರು 5 ಕಿಲೋಮೀಟರ್ ವರೆಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಕಾಮಗಾರಿ ಕಳಪೆ ಮಟ್ಟದ್ದಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ವರ್ಷವಷ್ಟೇ ಈ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು ಹೆದ್ದಾರಿ ಮಧ್ಯೆ ತಗ್ಗು ಗುಂಡಿಗಳು ಬಿದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಅದಲ್ಲದೆ ಇಲ್ಲಿರುವ ತಗ್ಗು ಗುಂಡಿಗಳಿಂದ ಅಪಘಾತಗಳು ಕೂಡ ಸಂಭವಿಸುತ್ತಿವೆ.

ಅದೇ ರೀತಿ ಇಲ್ಲಿಯ ರಸ್ತೆ ಮಧ್ಯೆ ಅಳವಡಿಸಿರುವ ಲೈಟ್ ಗಳು ಕಳಪೆ ಮಟ್ಟದ್ದಾಗಿದ್ದು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಈಗಾಗಲೇ ಅರ್ಧದಷ್ಟು ಲೈಟ್ ಗಳು ಉರಿಯುತ್ತಿಲ್ಲ ಇದೆಲ್ಲವನ್ನು ಕಂಡರು ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಇದಕ್ಕೆ ಕಾರಣ ಅಧಿಕಾರಿಗಳು ಈ ಕಳಪೆ ಕಾಮಗಾರಿಯಲ್ಲಿ ಶಾಮಿಲಾಗಿದ್ದಾರೆ ಎಂಬ ಅನುಮಾನ ಹುಟ್ಟಿಕೊಂಡಿದೆ.

ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರು ಇತ್ತಕಡೆ ಗಮನಿಸಿ ರಸ್ತೆ ಹಾಗೂ ಲೈಟ್ ಗಳನ್ನು ಸರಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ: ಉದಯ ಗೌಡರ

Edited By : Nagesh Gaonkar
Kshetra Samachara

Kshetra Samachara

18/08/2022 07:34 pm

Cinque Terre

31.97 K

Cinque Terre

1

ಸಂಬಂಧಿತ ಸುದ್ದಿ