ಹುಬ್ಬಳ್ಳಿ: ಹುಬ್ಬಳ್ಳ್ಯಾಗ ಏನ ನಡಿತಿದೆ ಅಂತಾನೇ ಗೊತ್ತ ಆಗವಲ್ದು ನೋಡ್ರಿ. ಮೊದಲು ಫುಟ್ ಪಾತ್ ಮೇಲೆ ಫೀವರ್ಸ್ ಹಾಕಿ ಹೋಗ್ತಾರ. ಸ್ವಲ್ಪ ದಿನ ಆಗುತ್ತಲೇ ಮತ್ತೇ ಬಂದು ಕಿತ್ತು ಜಾತ್ರಿ ಮಾಡಿ ಹೋಗ್ತಾರೆ. ಹಿಂಗಾದರೇ ಹ್ಯಾಂಗ್ ಜೀವನ ಮಾಡಬೇಕು. ಎಷ್ಟು ಹೇಳಿದ್ರೂ ಇಲ್ಲಿನ ಅಧಿಕಾರಿಗಳಿಗೆ ಮತ್ತೇ ಜನಪ್ರತಿನಿಧಿಗಳಿಗೆ ಅರ್ಥನ ಆಗ್ತಿಲ್ಲ ನೋಡ್ರಿ...
ಹೌದ್ರಿ..ಹುಬ್ಬಳ್ಳಿ ಧಾರವಾಡಕ್ಕೆ ಸ್ನೋ..ಪೌಡರ್ ಹಚ್ಚಿ ಮಸ್ತ್ ಮಾಡಬೇಕು ಅಂತ ಸ್ಮಾರ್ಟ್ ಸಿಟಿ ಯೋಜನೆ ತಂದಾರ. ಆದ್ರ ಇಲ್ಲಿನ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ ಅಹ್ಮದ ಅವರ ಅವೈಜ್ಞಾನಿಕ ನಡೆಯಿಂದ ಎಲ್ಲ ಹಾಳಾಗಿ ಹೊಂಟೈತಿ. ಸ್ಮಾರ್ಟ್ ಮಾಡೋಕೆ ಹೊಂಟ ಅಧಿಕಾರಿಗಳ ಮತ್ತ ಜನಪ್ರತಿನಿಧಿಗಳು ಮಂದಿ ಕಣ್ಣಿಗೆ ಮಣ್ಣು ಹಾಕಿ ಏನ ಮಾಡಿದರೂ ನಡಿತೈತಿ ಅಂತಾ ಮಾಡ್ಯಾರ ನೋಡ್ರಿ..
ಈ ಹಿಂದ ಪಬ್ಲಿಕ್ ನೆಕ್ಸ್ಟ್ ಸಾಕಷ್ಟು ಸಲ ವರದಿ ಮಾಡಿ ಇಲ್ಲಿ ಕಾರ್ಪೋರೆಟರ್ ಬುರಬುರೆ ಅವರ ಗಮನಕ್ಕ ತಂದ್ರೂ ಅವ್ರು ತಲಿನ ಕೆಡಿಸಿಕೊಂಡಿಲ್ಲ. ನೋಡ್ರಿ ಯಾರ ಏನ ಹೇಳಿದ್ರೂ ಹುಬ್ಬಳ್ಳಿಯ ದಾಜೀಬಾನ ಪೇಟೆಯಲ್ಲಿನ ಫುಟ್ ಪಾತ್ ಫೀವರ್ಸ್ ಕಿತ್ತು ಹಾಳು ಮಾಡಿ ಹೊಂಟಾರ.
ಒಟ್ಟಿನ್ಯಾಗ ಹುಬ್ಬಳ್ಳಿ ಧಾರವಾಡ ಮಂದಿ ಕಷ್ಟಕ್ಕ ಬೆಲೆ ಕೊಡಬೇಕಾದವರು ಬೇಕಾಬಿಟ್ಟಿ ಆಟ ನಡಿಸ್ಯಾರ ಹಿಂಗಾದರೇ ಇನ್ನೆನೂ ಕೆಲವೇ ದಿನದಾಗ ಸ್ಮಾರ್ಟ್ ಸಿಟಿ ವರ್ಸ್ಟ್ ಸಿಟಿ ಆಗೋದಂತೂ ಗ್ಯಾರಂಟಿ ಐತಿ ನೋಡ್ರಿ.
Kshetra Samachara
10/08/2022 05:46 pm