ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ-ರಾಮೇಶ್ವರ ವಿಕ್ಲಿ ಸ್ಪೆಷಲ್ ಟ್ರೇನ್: ವಾಸ್ಕೋ, ವೆಲಂಕಣಿ ಅವಧಿ ವಿಸ್ತರಣೆ

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಸದ್ಗುರು ಶ್ರೀ ಸಿದ್ಧಾರೂಢರ ರೈಲ್ವೆ ನಿಲ್ದಾಣ ಹುಬ್ಬಳ್ಳಿಯಿಂದ ರಾಮೇಶ್ವರಂ ವೀಕ್ಲಿ ಸ್ಪೆಷಲ್‌ ಎಕ್ಸ್‌ಪ್ರೆಸ್ ರೈಲು ಆ. 6 ರಿಂದ ಸೆ. 24ರವರೆಗೆ ವಾರದಲ್ಲಿ 8 ಟ್ರಿಪ್ ಸಂಚರಿಸಲಿದೆ.

ಪ್ರತಿ ಶನಿವಾರ ಬೆಳಗ್ಗೆ 6.30 ಹುಬ್ಬಳ್ಳಿ ನಿಲ್ದಾಣ ಹೊರಡುವ ರೈಲು, ಮಾರನೇ ದಿನ ಬೆಳಗ್ಗೆ 6.15ಕ್ಕೆ ರಾಮೇಶ್ವರಂ ತಲುಪಲಿದೆ. ಆ.7 ರಿಂದ ಸೆ. 25ರವರೆಗೆ ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ ರಾಮೇಶ್ವರಂ ನಿಲ್ದಾಣದಿಂದ ಹೊರಡುವ ರೈಲು, ಮಾರನೇ ದಿನ ರಾತ್ರಿ 7.25ಕ್ಕೆ ಎಸ್ಎಸ್ಎಸ್‌ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.25ರವರೆಗೆ ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ ರಾಮೇಶ್ವರಂ ನಿಲ್ದಾಣದಿಂದ ಹೊರಡುವ ರೈಲು, ಮಾರನೇ ದಿನ ರಾತ್ರಿ 7.25ಕ್ಕೆ ಎಸ್‌ಎಸ್ಎಸ್‌ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.

ಸಂಚಾರ ವಿಸ್ತಾರ: ವಾಸ್ಕೊ-ನಾಗಪಟ್ಟಣಂ-ವಾಸ್ಕೋ ವೀಕ್ಲಿ- ಎಕ್ಸ್‌ಪ್ರೆಸ್‌ ರೈಲು ಸಂಚಾರ ಆ. 8 ರಿಂದ ಹಾಗೂ ನಾಗಪಟ್ಟಣಂ-ವಾಸ್ಕೊ ರೈಲು ಸಂಚಾರ ಆ. 9ರಿಂದ ವೆಲಂಕಣಿವರೆಗೆ ವಿಸ್ತಾರಗೊಳ್ಳಲಿವೆ. ವಾಸ್ಕೊದಿಂದ ಹೊರಡುವ ರೈಲು ಮಧ್ಯಾಹ್ನ 12.25ಕ್ಕೆ ವೆಲಂಕಣಿಯನ್ನು ತಲುಪಲಿದ್ದು, ರಾತ್ರಿ 11.45ಕ್ಕೆ ಈ ರೈಲು ವೆಲಂಕಣಿಯಿಂದ ಹೊರಡಲಿದೆ ಎಂದು ಪ್ರಕಟಣೆ ತಿಳಿಸಿದೆ.

Edited By :
Kshetra Samachara

Kshetra Samachara

04/08/2022 11:09 pm

Cinque Terre

33.85 K

Cinque Terre

0

ಸಂಬಂಧಿತ ಸುದ್ದಿ