ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸಂತೆ ಇಲ್ಲದ ಮಾರುಕಟ್ಟೆ ಅಂಗನವಾಡಿ ಮಕ್ಕಳಿಗೆ ತಾಪತ್ರೇ..!

ಕುಂದಗೋಳ : ಅದೊಂದು ಸಂತೆ ಮಾರುಕಟ್ಟೆ ಸ್ಥಳ, ಆ ಸ್ಥಳದಲ್ಲಿ ಸಂತೆ ಬಿಟ್ಟು ಬೇರೆಲ್ಲಾ ಅವ್ಯವಸ್ಥೆ ರೋಗದ ಕಾರ್ಖಾನೆಯೆ ಬಿಡಾರ ಹೂಡಿವೆ. ಇಂತಹ ಸ್ಥಳದ ಪಕ್ಕದಲ್ಲೇ ಅಂಗನವಾಡಿ ಕಟ್ಟಡ ಇದ್ದು, ಮಕ್ಕಳು ಸಹ ಅಲ್ಲೇ ಆಟವಾಡ್ತಾರೆ ಇದರಿಂದ ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗದ ಭಯ ಹುಟ್ಟಿದೆ.

ಇದು ಕುಂದಗೋಳ ತಾಲೂಕಿನ ಶಾಸಕರ ಗ್ರಾಮ ಯರಗುಪ್ಪಿಯ ಸಂತೆ ಮಾರುಕಟ್ಟೆ ದುಸ್ಥಿತಿ ಇದು, ಈ ಸಂತೆ ಮಾರುಕಟ್ಟೆಯನ್ನು ಕೆರೆ ಪಕ್ಕ ಇಷ್ಟೋಂದು ಸುಸುಜ್ಜೀತವಾಗಿ ನಿರ್ಮಾಣ ಮಾಡಿ ಬಳಕೆ ಮಾಡದೇ ಕೈ ಬಿಟ್ಟ ಪರಿಣಾಮ ಇಲ್ಲಿ ಕುರಿಗಳ ವಾಸ ಆರಂಭವಾಗಿ ಸಂತೆ ಮಾರುಕಟ್ಟೆ ಈಗ ಕುರಿದೊಡ್ಡಿ ಆಗಿದೆ.

ಅಂತಹ ಅವ್ಯವಸ್ಥೆ ದುರ್ನಾತ, ಕುರಿ ಮೂತ್ರ ವಿಸರ್ಜನೆ ಸಂಗ್ರಹವಾಗಿದ್ದು, ಸಂತೆ ಮಾರುಕಟ್ಟೆ ನೆಲಹಾಸು ಕಲ್ಲು, ಪಾಟಿಗಲ್ಲು ಒಡೆದು ಹಾಳಾಗ್ತಾ ಇವೆ, ಕೆಲ ಖಾಸಗಿ ಜನರು ಟ್ರ್ಯಾಕ್ಟರ್, ಟೇಲರ್ ನಿಲ್ಲಿಸಲು ಈ ಸ್ಥಳ ಬಳಕೆಯಾಗುತ್ತಿದೆ. ಮುಖ್ಯವಾಗಿ ಈ ಮಾರುಕಟ್ಟೆ ಪಕ್ಕವೇ ಅಂಗನವಾಡಿ ಇದ್ದು ಮಕ್ಕಳು ಇಲ್ಲಿ ಆಟ ಆಡೋದು ಸಹಜವಾಗಿದ್ರಿಂದ ರೋಗಕ್ಕೆ ತುತ್ತಾಗುತ್ತಾರೋ ಅನ್ನೊದು ಸಮಸ್ಯೆಯಾಗಿದೆ.

ಪ್ರತಿ ಶನಿವಾರ ಯರಗುಪ್ಪಿಯಲ್ಲಿ ನಡೆಯುವ ಸಂತೆಗೆ ಪೂರಕವಾಗಲು ಜನರ ಅನುಕೂಲಕ್ಕಾಗಿ ಈ ಮಾರುಕಟ್ಟೆ ಕಟ್ಟಿಸಿದ್ದು, ಆದರೆ ಇಲ್ಲಿಯವರೆಗೆ ಇದರ ಬಳಕೆ ಸರಿಯಾಗಿ ಆಗಿಲ್ಲ..

ಒಟ್ಟಾರೆ ಯರಗುಪ್ಪಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ತಾಲೂಕು ಜಿಲ್ಲಾ ಮೇಲ್ಮಟ್ಟದ ಅಧಿಕಾರಿಗಳು, ಶಾಸಕರು ಗಮನಹರಿಸಿ ಸಂತೆ ಮಾರುಕಟ್ಟೆಯನ್ನು ಜನರ ಉಪಯೋಗಕ್ಕೆ ತೆರದಿಡಬೇಕಿದೆ.

ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

Edited By : Manjunath H D
Kshetra Samachara

Kshetra Samachara

04/08/2022 04:41 pm

Cinque Terre

29.15 K

Cinque Terre

0

ಸಂಬಂಧಿತ ಸುದ್ದಿ