ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಕುಂದಗೋಳ : ಇಡೀ ಕುಂದಗೋಳ ತಾಲೂಕಿನಲ್ಲಿರುವ ನೀರಿನ ಸಮಸ್ಯೆ, ರಸ್ತೆ ಸಮಸ್ಯೆ ಸೇರಿದಂತೆ ಹಲವಾರು ಕಾಮಗಾರಿ ಕೈಗೊಳ್ಳಬೇಕಾದ ಇಲಾಖೆ ಈ ರೀತಿ ಸೋರುತ್ತ ಶಿಥಿಲಾವಸ್ಥೆ ತಲುಪಿದೆ.
ಹೌದು ! ಇದೋ ಕುಂದಗೋಳ ತಾಲೂಕಿನ ನೂರಾರು ಸಾರ್ವಜನಿಕರು, ಗುತ್ತಿಗೆದಾರರು ನಿತ್ಯ ಬರುವ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಕಾರ್ಯಾಲಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ.
ಆದ್ರೇ ! ಇದೀಗ ಕಚೇರಿಯಲ್ಲೇ ನೈರ್ಮಲ್ಯ ಮಾಯವಾಗಿ ಇಲಾಖೆ ಕಟ್ಟಡ ಎಲ್ಲೇಂದರಲ್ಲಿ ಬಿರುಕು ಬಿಟ್ಟು ಸೋರುತ್ತಿದೆ. ನೆಲಹಾಸು ಸಂಪೂರ್ಣ ನೀರು ನಿಂತಿದೆ. ಇನ್ನೂ ಅಧಿಕಾರಿಗಳು ಕೂರುವ ಕೋಣೆ ಸಹ ಸೋರುತ್ತಾ ದುರ್ನಾತ ಎದ್ದಿದೆ. ಕಟ್ಟಡ ಸೋರುವ ಕಾರಣ ಕೆಲೆವೆಡೆ ಅಪಾಯದ ಮುನ್ಸೂಚನೆ ಅರಿತು, ವಿದ್ಯುತ್ ಸಂಪರ್ಕ ಸಹ ಕಟ್ ಮಾಡಿದ್ದಾರೆ.
ಅಲ್ಲಿನ ಸಿಬ್ಬಂದಿಗಳೇ ಹೇಳೋ ಪೈಕಿ ಕಳೆದ 50 ವರ್ಷಗಳಿಂದ ಈ ಕಟ್ಟಡದಲ್ಲಿ ಇಲಾಖೆ ಕರ್ತವ್ಯ ಮಾಡ್ತಾ ಇದ್ರೂ ಎಲ್ಲೇಡೆ ಸಿಮೆಂಟ್ ಕಿತ್ತು, ಗೋಡೆ ಬಿರುಕು ಬಿಟ್ಟು, ನೀರು ಸೋರುತ್ತಾ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದರೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇನ್ನೂ ಇಲಾಖೆ ಸುತ್ತ ಮುತ್ತಲಿನ ಜಾಗ ಚರಂಡಿ ಕೊಳಚೆಯಿಂದ ತುಂಬಿದ್ದು ನಿರ್ವಹಣೆ ಇಲ್ಲದಾಗಿದೆ. ಅಧಿಕಾರಿಗಳು ಇಲ್ಲದೆ ಇದ್ರೂ ಫ್ಯಾನ್, ಲೈಟ್ ಆನ್ ಮಾಡಿ ಕೈ ಬಿಡಲಾಗಿದೆ. ಈ ಬಗ್ಗೆ ಕೇಳಿದ್ರೆ ನೆಲದ ಹಸಿ ಆರಲು ಈ ರೀತಿ ಮಾಡಿದ್ದೇವೆ ಎಂತಾರೇ ಸಿಬ್ಬಂದಿಗಳು.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
16/07/2022 08:27 pm