ನವಲಗುಂದ: ನವಲಗುಂದ ತಾಲೂಕಿನ ಹಲವು ಗ್ರಾಮಗಳಿಗೆ ತೆರಳಬೇಕಾದರೆ ಬಸ್ ವ್ಯವಸ್ಥೆಯ ಕೊರತೆ ಕಂಡು ಬರುತ್ತೆ. ಈಗ ಇಂತಹದ್ದೇ ಸಮಸ್ಯೆಯಿಂದ ಕೊಂಗವಾಡ ಗ್ರಾಮಸ್ಥರು ಪಟ್ಟಣದ ಬಸ್ ನಿಲ್ದಾಣದಲ್ಲಿ ಕೆಲಕಾಲ ಬಸ್ ತಡೆದು ಆಕ್ರೋಶ ಹೊರ ಹಾಕಿದ ಘಟನೆ ನಡೆದಿದೆ.
ನವಲಗುಂದ ತಾಲೂಕಿನ ಕೊಂಗವಾಡ ಗ್ರಾಮಕ್ಕೆ ಬೆಳಗ್ಗೆಯಿಂದ ತಕ್ಕಮಟ್ಟಿಗೆ ಬಸ್ ವ್ಯವಸ್ಥೆ ಇದೆ ಅಂತೆ, ಆದರೆ 1:30ರ ನಂತರ 3:30 ಒಳಗೆ ಅಂದರೆ ಸರಿ ಸುಮಾರು ಎರಡು ಗಂಟೆಗಳ ಕಾಲ ಯಾವುದೇ ಬಸ್ ನ ವ್ಯವಸ್ಥೆ ಗ್ರಾಮಕ್ಕೆ ಇಲ್ಲ ಎಂದು ಆರೋಪಿಸಿ, ಗ್ರಾಮಸ್ಥರು ಇಂದು ನವಲಗುಂದ ಪಟ್ಟಣದಲ್ಲಿ ಬಸ್ ತಡೆದು ಆಕ್ರೋಶವನ್ನ ಹೊರಹಾಕಿದರು.
Kshetra Samachara
09/07/2022 08:13 pm