ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಖಬರಸ್ಥಾನ್‌ಕ್ಕೆ ಮೂಲ ಸೌಕರ್ಯ ಒದಗಿಸಿ: ಪಾಲಿಕೆಗೆ ಸಲೀಂ ಅಹ್ಮದ್ ಪತ್ರ

ಧಾರವಾಡ: ಧಾರವಾಡ ಜನ್ನತನಗರದ ಲಕಮನಹಳ್ಳಿಯಲ್ಲಿರುವ ಅಂಜಮನ್ ಖಬರಸ್ಥಾನ್‌ ಕ್ಕೆ ಮೂಲ ಸೌಕರ್ಯ ನೀಡುವಂತೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರು ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ನೀಡಿರುವ ಪತ್ರವನ್ನು ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಹಾಗೂ ಇಮ್ರಾನ್ ಕಳ್ಳಿಮನಿ ನೇತೃತ್ವದಲ್ಲಿ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಅವರಿಗೆ ನೀಡಲಾಯಿತು.

ಈ ಖಬರಸ್ಥಾನ್‌ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದೆ. ಸುಮಾರು 20 ಎಕರೆ ಪ್ರದೇಶದಲ್ಲಿರುವ ಈ ಖಬರಸ್ಥಾನ್‌ದಲ್ಲಿ ಯಾವುದೇ ಪಾಥ್ ವೇ ಇಲ್ಲದೇ ಇರುವುದರಿಂದ ಮಳೆಗಾಲದಲ್ಲಿ ಅಲ್ಲಿಗೆ ಹೋಗಲು ಸಾಕಷ್ಟು ತೊಂದರೆಯಾಗುತ್ತಿದೆ. ಹೀಗಾಗಿ ಕೂಡಲೇ ಈ ಖಬರಸ್ಥಾನ್‌ಕ್ಕೆ ಪಾಥ್‌ ವೇ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಲೀಂ ಅಹ್ಮದ್ ಅವರು ಆಗ್ರಹಿಸಿದ್ದಾರೆ.

ಶೇಖ್ ಸನದಿ, ಎಂ.ಎಚ್.ಸರದೇಸಾಯಿ, ಮೋಯಿನ್ ಬೀಡಿವಾಲೆ, ಮುನ್ನಾ ಮಿಶ್ರಿಕೋಟಿ, ಇಜಾಜ್ ಸೈಯದ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿದ್ದರು.

Edited By : Shivu K
Kshetra Samachara

Kshetra Samachara

08/07/2022 04:26 pm

Cinque Terre

66.32 K

Cinque Terre

3

ಸಂಬಂಧಿತ ಸುದ್ದಿ