ಪಬ್ಲಿಕ್ ನೆಕ್ಸ್ಟ್ ವರದಿ: ಈರಣ್ಣ ವಾಲಿಕಾರ
ಹುಬ್ಬಳ್ಳಿ: ಆಯಾ ಸಮುದಾಯಗಳಿಗೆ ಅನುಕೂಲವಾಗಲೆಂದು ಸರ್ಕಾರ ಸಮುದಾಯ ಭವನವನ್ನು ನಿರ್ಮಿಸುತ್ತದೆ. ಆದರೆ ಇಲ್ಲೊಂದು ಸಮುದಾಯ ಭವನವನ್ನು ನಿರ್ಮಾಸಿದ್ದಾರೆ. ಅದೆಷ್ಟು ಕಳಪೆಯಾಗಿ ನಿರ್ಮಾಣ ಮಾಡಿದ್ದಾರೆ ಎಂಬುದನ್ನು ನಾವು ತೋರಸ್ತೇವಿ ನೋಡಿ.
ಹೌದು. ಹೀಗೆ ಭವನದಲ್ಲಿ ಎಲ್ಲೆಂದರಲ್ಲಿ ನೀರು, ಒಂದಡೆ ಒಡೆದಿರುವ ಗ್ಲಾಸ್, ಗೊಡೆಯ ಸಮೇತ ನೀರು ಸೋರುತ್ತಿದೆ. ಒಂದು ಸಣ್ಣ ಮಳೆಯಾದರೂ ಸಾಕು ಭವನದ ಒಳಗೆ ನೀರು ಬರುತ್ತದೆ. ಇಷ್ಟೆಲ್ಲ ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದ್ದು, ನಗರದ ಕರ್ಕಿಬಸವೇಶ್ವರ ನಗರದಲ್ಲಿ ನಿರ್ಮಿಸಿದ ಡಾ. ಬಿಆರ್ ಅಂಬೇಡ್ಕರ್ ಭವನದ ದುಸ್ಥಿತಿ.
2017ರಲ್ಲಿ ಸುಮಾರು 2 ಕೋಟಿ ರೂ. ಅನುದಾನದಲ್ಲಿ ಕರ್ಕಿ ಬಸವೇಶ್ವರ ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಮಾಡಿರುತ್ತಾರೆ. ಆದರೆ ಇದು ದುಸ್ಥಿತಿ ಕಳಪೆ ಕಾಮಗಾರಿಯಿಂದ ಕೂಡಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೇ ಸುಸಜ್ಜಿತ ಹೈಟೆಕ್ ಭವನ ನಿರ್ಮಿಸಬೇಕು ಎಂದು ಅಲ್ಲಿನ ನಿವಾಸಿಗಳು ಹಾಗೂ ದಲಿತ ಸಮುದಾಯದ ಮುಖಂಡರು ಆಗ್ರಹಿಸಿದರು.
ಅಂಬೇಡ್ಕರ ಭವನ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ಮಂಜೂರಾಗಿದೆ. ಅಲ್ಪ ಮೊತ್ತದಲ್ಲಿ ಕಟ್ಟಡ ನಿರ್ಮಿಸಿ ಉಳಿದ ಹಣವನ್ನು ನುಂಗುವ ಮೂಲಕ ಸರ್ಕಾರದ ಹಣವನ್ನು ಕೊಳ್ಳೆ ಹೊಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲದೆ ಕಟ್ಟಡದ ದುಸ್ಥಿತಿ ಹಾಗೂ ಕಳಪೆ ಕಾಮಗಾರಿ ಬಗ್ಗೆ ಭ್ರಷ್ಟಾಚಾರ ನಿಗ್ರಹದಳ ಇಲಾಖೆ ಮತ್ತು ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಲಾಗುವುದು ಎಚ್ಚರಿಕೆ ನೀಡಿದ್ದಾರೆ.
Kshetra Samachara
20/06/2022 01:26 pm