ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗುದ್ದಲಿ ಪೂಜೆ ಆಗದೇ ಕೆಲಸ ಸ್ಟಾರ್ಟ್ ಆಗಲ್ಲ: ಗಾಂಧಿವಾಡ ಸಮಸ್ಯೆ ಗೂಡು

ಹುಬ್ಬಳ್ಳಿ: ಅದು ಪ್ರತಿಷ್ಠಿತ ಹುಬ್ಬಳ್ಳಿಯಲ್ಲಿರುವ ನಗರ. ಆ ನಗರಕ್ಕೆ ದೇಶದ ಮಹಾತ್ಮರ ಹೆಸರನ್ನು ಇಡಲಾಗಿದೆ. ಆದರೆ ನಗರದ ಸಮಸ್ಯೆ ನೋಡಿದರೇ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತದೆ. ಇಲ್ಲಿನ ಅಧಿಕಾರಗಳ ಅಂಧಕಾರದಿಂದ ಜನರ ಕಣ್ಣಲ್ಲಿ ನೀರನ ಬದಲಿಗೆ ನೆತ್ತರು ಬರುತ್ತಿದೆ. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಬಿಚ್ಚಿಡುತ್ತಿದೆ ಸಾರ್ವಜನಿಕ ಸಮಸ್ಯೆಯ ಇಂಟ್ರಸ್ಟಿಂಗ್ ಕಹಾನಿ...

ಹೀಗೆ ಕಣ್ಣೀರು ಹಾಕುತ್ತಿರುವ ವೃದ್ಧೆ. ಬಿಟ್ಟು ಬಿಡದಂತೆ ನೀರು ತುಂಬಿ ಚಲ್ಲುತ್ತಿರುವ ಮಹಿಳೆ. ಯಾಕಪ್ಪ ಬೇಕು ಈ ಜೀವನ ಅಂತ ಬೇಸರದಿಂದ ನೀರು ಹೊರ ಹಾಕುತ್ತಿರುವ ಯುವಕ ಈ ಎಲ್ಲ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಹುಬ್ಬಳ್ಳಿಯ ಗಾಂಧಿವಾಡ.

ಸುಮಾರು 170ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಗಾಂಧಿವಾಡದಲ್ಲಿ ಮಳೆ ಬಂದರೇ ಇಲ್ಲಿ ಮನೆಗಳು ಕರೆಯಂತಾಗುತ್ತವೆ. ಅಲ್ಲದೇ ಒಳಚರಂಡಿ ಅವ್ಯವಸ್ಥೆಯಿಂದ ಚರಂಡಿ ತುಂಬಿ ನೀರು ಮನೆಯೊಳಗೆ ನುಗ್ಗತ್ತದೆ. ಕುಡಿಯುವ ನೀರಿನಲ್ಲಿಯೂ ಚರಂಡಿ ನೀರು ಸೇರುವುದರಿಂದ ಇಲ್ಲಿನ ಜನರು ದಿನವೂ ನರಕಯಾತನೆ ಅನುಭವಿಸುವಂತಾಗಿದೆ.

ಇನ್ನೂ ಅದೆಷ್ಟೋ ಜನರು ಈ ಸಮಸ್ಯೆ ಸುಳಿಯಲ್ಲಿ ಸಿಲುಕಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೇ ಈ ಸಮಸ್ಯೆ ಬಗ್ಗೆ ಸ್ಥಳೀಯ ಕಾರ್ಪೊರೇಟರ್

ಆಯುಕ್ತರ ಗಮನಕ್ಕೆ ತಂದಿದ್ದಾರೆ. ಈ ಸಮಸ್ಯೆ ಬಗೆಹರಿಸಲು 63 ಲಕ್ಷದಲ್ಲಿ ಒಳಚರಂಡಿ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ.

ವರ್ಕ್ ಆರ್ಡರ್ ಕೂಡ ಆಗಿದ್ದರೂ ಜನಪ್ರತಿನಿಧಿಗಳು ಗುದ್ದಲಿ ಪೂಜೆ ಮಾಡದೇ ಕೆಲಸವನ್ನು ಆರಂಭಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರಂತೆ ಉತ್ತರ ವಲಯದ ಕಾರ್ಯನಿರ್ವಾಹಕ ಅಭಿಯಂತರ ವಿಠ್ಠಲ ತುಬಾಕೆ. ಈ ಬಗ್ಗೆ ಪಾಲಿಕೆ ಸದಸ್ಯರೇ ಏನ ಹೇಳಿದ್ದಾರೆ ಕೇಳಿ.

170 ಕುಟುಂಬದ ಜೊತೆಗೆ ಒಂಬತ್ತು ಕಾಲೋನಿಗಳಿಗೆ ಸಂಪರ್ಕ ಕಲ್ಪಿಸುವ ಡ್ರೈನೇಜ್ ಸಮಸ್ಯೆಯಿಂದ ಇಲ್ಲಿನ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಆದರೆ ಗುದ್ದಲಿ ಪೂಜೆ ಮಾಡದೇ ಕಾಮಗಾರಿ ಆರಂಭ ಮಾಡಲ್ಲ ಎಂದು ಉತ್ತರ ನೀಡುತ್ತಿರುವ ಅಧಿಕಾರಿಗಳ ನಡೆಯಿಂದ ಇಲ್ಲಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ.

ಒಟ್ಟಿನಲ್ಲಿ ಇಲ್ಲಿನ ಸಮಸ್ಯೆಯ ಬಗ್ಗೆ ಕಾಳಜಿ ವಹಿಸಬೇಕಿದ್ದ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಉತ್ತರ ನೀಡುತ್ತಿರುವುದು ಎಷ್ಟರಮಟ್ಟಿಗೆ ಸರಿ. ಜನರು ಸತ್ತರೂ ಪರವಾಗಿಲ್ಲ ಗುದ್ದಲಿ ಪೂಜೆಯಾಗದೇ ಕಾಮಗಾರಿ ಆರಂಭ ಮಾಡಲ್ಲ ಎಂಬುವ ಅಧಿಕಾರಿಗಳ ನಡೆಗೆ ಜನರ ಕಣ್ಣೀರಿನ ಶಾಪ ತಟ್ಟದೇ ಇರಲಾರದು.

ಪಬ್ಲಿಕ್ ನೆಕ್ಸ್ಟ್ ವಿಶೇಷ ಮಲ್ಲೇಶ್ ಸೂರಣಗಿ

Edited By : Manjunath H D
Kshetra Samachara

Kshetra Samachara

17/06/2022 04:17 pm

Cinque Terre

45.27 K

Cinque Terre

2

ಸಂಬಂಧಿತ ಸುದ್ದಿ