ಅಳ್ನಾವರ:ರೈತರೇ ದೇಶದ ಬೆನ್ನೆಲಬು.ರೈತರಿಂದ ದೇಶ ನಡೆಯುವುದು ಎಂದು ಬೊಬ್ಬೆ ಕುಟ್ಟುವ ರಾಜಕಾರಣಿಗಳು ಇಂದಿನ ರೈತರ ಪರಿಸ್ಥಿತಿಯು ಕಣ್ಣಿಗೆ ಕಾಣುತ್ತಿಲ್ಲವೇ.ಎಲ್ಲೆಡೆ ರೈತರಿಗೆ ಅನ್ಯಾಯ ವಾಗುತ್ತಿದೆ.ಬೀಜ ಗೊಬ್ಬರಗಳು,ಕೀಟ ನಾಶಕಕಗಳು ದುಬಾರಿ ಯಾಗಿವೆ.ರೈತರು ಬೆಳೆದ ಬೆಳೆಗೆ ಯೋಗ್ಯವಾದ ಬೆಲೆ ಸಿಗುತ್ತಿಲ್ಲ.ಇಂತಹ ಅನ್ಯಾಯಗಳನ್ನ ಮೆಟ್ಟಿಸಿ,ರೈತರಿಗೆ ಉಪಯುಕ್ತವಾದ ಕಾರ್ಯಗಳನ್ನ ಮಾಡುವಲ್ಲಿ ರೈತ ಸಂಘ ಅತ್ಯಂತ ಸಹಾಯಕಾರಿ ಯಾಗಿದೆ ಎಂದು ಗ್ರಾ,ಪಂ ಸದಸ್ಯ ಹಾಗೂ ರೈತ ಸಂಘದ ಗ್ರಾಮ ಘಟಕದ ಉಪಾಧ್ಯಕ್ಷ ಮಂಜುನಾಥ ಬೆಳಗಾವಿ ಹೇಳಿದರು.
ಹುಲಿಕೇರಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಂದಿನಿಂದ ಇಂದಿನವರೆಗೂ ರೈತರಿಗೆ ಅನ್ಯಾಯ ವಾಗುತ್ತಲೆ ಇದೆ.ಇದನ್ನ ಖಂಡಿಸುವವರು ಯಾರು.?ಹೆಸರಿಗೆ ಮಾತ್ರ ರೈತ ದೇಶದ ಬೆನ್ನೆಲು.ರೈತ ಸಮುದಾಯಕ್ಕೆ ಯಾವುದೇ ರೀತಿಯ ನ್ಯಾಯ ಸಿಗುತ್ತಿಲ್ಲ.ಈ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಕಾರ್ಯ ಈ ರೈತ ಸಂಘ ಮಾಡುತ್ತದೆ ಎಂದರು.
ತಾಲೂಕಾ ಉಪಾಧ್ಯಕ್ಷ ಅಲ್ಲಾಭಕ್ಷ ಕುಂದುಬೈನವರ ಮಾತನಾಡಿ ಡಿ,ವಿ ಗುಂಡಪ್ಪ ಹಾಗೂ ಬಾಬಾಗೌಡ ರಂತವರನ್ನು ವಿಧಾನಸೌಧ ದ ಮೆಟ್ಟಿಲುಗಳನ್ನು ಹತ್ತುವಂತೆ ಮಾಡಿದ್ದೆ ಇದೆ ರೈತ ಸಂಘ.ಹೊರಾಟದ ಮನೋಭಾವನೆ ಹೊಂದಿದ್ದು ರೈತ ಸಂಘ.ಇದರಲ್ಲಿ ಯಾವುದೇ ರಾಜಕೀಯ ದ ಬಣ್ಣ ಬೇಡ.ಸಂಘ ವೆಂದರೆ ರೈತರಿಗೆ ಅನ್ಯಾಯ ವಾದಾಗ ಎಲ್ಲರೂ ಒಗ್ಗೂಡಿ ನ್ಯಾಯ ಕೇಳುವ ಪರಿಕಲ್ಪನೆ ಯಾಗಿದೆ.ಎಲ್ಲರೂ ಒಮ್ಮತದಿಂದ ರೈತ ಸಮುದಾಯಕ್ಕೆ ಶಕ್ತಿ ತುಂಬುವ ಕೆಲಸ ಮಾಡೋಣ ಎಂದು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕಲ್ಮೇಶ ಲಿಂಗಾಡೆ,ಗ್ರಾಮ ಘಟಕದ ಅಧ್ಯಕ್ಷ ಮಲ್ಲಿಕ್ ಅಂಚಿ,ತಾಲೂಕಾ ಅಧ್ಯಕ್ಷ ಅಲ್ಲಾಭಕ್ಷ ಕುಂದುಬೈನವರ,ಗ್ರಾ,ಪಂ ಅಧ್ಯಕ್ಷರು ಸದಸ್ಯರು,ಗ್ರಾಮಸ್ಥರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
14/06/2022 12:36 pm