ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಕುಡಿಯುವ ನೀರು ಹಿಂಗ್ ಹಾಳ ಆದ್ರ ಹೆಂಗ್ ರೀ…

ಧಾರವಾಡ : ಜೀವ ಜಲ ರಕ್ಷಣೆ ಮಾಡ್ರಿ ಅಂತಾ ಸರ್ಕಾರ ಸಾಕಷ್ಟು ತಿಳುವಳಿಕೆ ಕಾರ್ಯಕ್ರಮ ಕೊಟ್ರು ಏನು ಪ್ರಯೋಜನ ಆಗಿಲ್ಲ ನೋಡ್ರಿ.

ಇದಕ ಬೆಸ್ಟ್ ಉದಾಹರಣೆ ಅಂತ ಅಂದ್ರ ಧಾರವಾಡದ ಮದಾರಮಡ್ಡಿ ಜಯಭೀಮ್ ನಗರದಾಗ ಕಳದ 20 ರಿಂದ 25 ದಿನದಿಂದ ಹುಬ್ಬಳ್ಳಿಗೆ ಕುಡಿಯುವ ನೀರು ಸರಬರಾಜು ಮಾಡುವ ದೊಡ್ಡ ಪೈಪ್ ಲೈನ್ ಒಡೆದು ನೀರು ರಸ್ತೆ ಮ್ಯಾಲ ಹರಿಯಾಕತೈತಿ ಆದ್ರ ಈ ಒಡದ ಪೈಪ್ ಸರಿ ಮಾಡಾರು ಯಾರು ಇಲ್ಲ ನೋಡ್ರಿ.

ಇನ್ನ ಆ ಏರಿಯಾದಾಗಿನ ಮಂದಿ ಸಂಬಂಧಿಸಿದವರ ಗಮನಕ್ಕ ತಂದ್ರು ಯಾರು ಕ್ಯಾರೆ ಅಂದಿಲ್ಲಂತ್ರಿ ಹಿಂಗಂತ್ ನಾವ್ ಹೇಳಾಕತ್ತಿಲ್ಲ ರೀ ಅಲ್ಲಿ ಮಂದಿನ ಹೇಳ್ಯಾರ. ಹಂಗ ಈ ಎಲ್ ಆ್ಯಂಡ್ ಟಿ ಮತ್ತು ಜಲಮಂಡಳಿ ಗುದ್ಯಾಟದಾಗ ಈ ಕುಡಿಯುವ ನೀರ ಹಿಂಗ್ ಹರದ ಹೊಂಟ್ರು ಹೇಳಾರಿಲ್ಲ ಕೇಳಾರಿಲ್ಲ ಇನ್ನರ ಸಂಬಂಧಿಸಿದ ಅಧಿಕಾರಿಗಳು ಇತ್ತ ಕಡೆ ನೋಡಿ ಹರದ ಹೋಗು ನೀರ ಬಂದ್ ಮಾಡ್ರಿ..

Edited By : Shivu K
Kshetra Samachara

Kshetra Samachara

31/05/2022 07:52 pm

Cinque Terre

17.29 K

Cinque Terre

2

ಸಂಬಂಧಿತ ಸುದ್ದಿ