ಕುಂದಗೋಳ: ಇಲ್ಲೊಂದು ರಸ್ತೆಗೆ ಮಳೆ ನೀರಿನ ಜೊತೆ ಕುಂದಗೋಳ ಪಟ್ಟಣದ ಕಲುಷಿತ ನೀರು ನುಗ್ಗುತ್ತಾ ವಾಹನ ಸಂಚಾರ ಹಾಗೂ ಕೃಷಿ ಸಂಬಂಧಿತ ವಾಹನಗಳ ಓಡಾಟಕ್ಕೆ ಅಡೆತಡೆ ತಂದಿದೆ.
ಮಳೆ ನಿಂತರೂ ಕುಂದಗೋಳ ಪಟ್ಟಣದಿಂದ ಗುಡೇನಕಟ್ಟಿ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ಹರಿಯುವ ನೀರು ಮಾತ್ರ ನಿಂತಿಲ್ಲ. ಇದಲ್ಲದೆ ಕುಂದಗೋಳದ ಪಟ್ಟಣದಿಂದ ಹೊರ ಬರುವ ಚರಂಡಿ ಕಲುಷಿತ ನೀರು ಎಪಿಎಂಸಿ ಮೂಲಕ ಹೊರ ಹಾಯ್ದು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಗುಡೇನಕಟ್ಟಿ ರಸ್ತೆ ಮೇಲೆ ಹರಿಯುತ್ತಿದೆ.
ಇದರಿಂದ ರಸ್ತೆ ಸಂಪೂರ್ಣ ತಗ್ಗು, ಗುಂಡಿ, ಕಲ್ಲು, ಕಲುಷಿತ ನೀರಿನಿಂದಲೇ ಭರ್ತಿಯಾಗಿ, ವಾಹನಗಳು ಓಡಾಡುವಾಗ ಪಂಕ್ಚರ್ ಆಗಿ ಸಾರಿಗೆ ಬಸ್ ಓಡಾಟವೂ ಕಷ್ಟವಾಗಿದೆ.
ಪ್ರತಿ ವರ್ಷ ಮಳೆಗಾಲದಲ್ಲಿ ರಸ್ತೆಗೆ ಭಾರಿ ಪ್ರಮಾಣದ ನೀರು ನುಗ್ಗಿ ಈ ರೀತಿ ಹಾಳಾಗುತ್ತಿದ್ದರೆ, ಕಲುಷಿತ ನೀರು ರಸ್ತೆ ಮೇಲೆ ಹರಿಯುವ ಪರಿಣಾಮ ಎಲ್ಲೇಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಬಳಸಿ ಬಿಸಾಡಿದ ವಸ್ತುಗಳೇ ಬಿದ್ದಿದ್ದು ಗುಡೇನಕಟ್ಟಿ ರಸ್ತೆ ಇದೀಗ ತ್ಯಾಜ್ಯದಿಂದ ಕೂಡಿದ್ದು ಗ್ರಾಮಸ್ಥರಿಗೆ ಬೇಸರ ತಂದಿದೆ.
-ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್
Kshetra Samachara
23/05/2022 12:35 pm