ನವಲಗುಂದ: ನವಲಗುಂದ ತಾಲೂಕಿನ ಯಮನೂರ ಚಾಂಗದೇವನ ಜಾತ್ರೆ ಈಗಾಗಲೇ ಮುಗಿದಿದೆ. ಜಾತ್ರೆಯ ವೇಳೆ ಬಂದ ಭಕ್ತರಿಗೆ ಗ್ರಾಮ ಪಂಚಾಯತ್ ಕುಡಿಯುವ ನೀರಿನ ವ್ಯವಸ್ಥೆ ಮಾಡಿತ್ತು. ಆದರೆ ಅಧಿಕಾರಿಗಳ ನಿರ್ವಹಣೆ ಕೊರತೆಯಿಂದ ನೀರು ಚರಂಡಿ ಪಾಲಾಗುತ್ತಿದೆ.
ಯಮನೂರ ಗ್ರಾಮ ಪಂಚಾಯತ್ ಜಾತ್ರೆಯ ಸಮಯದಲ್ಲಿ ಭಕ್ತರಿಗಾಗಿ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಸಾಕಷ್ಟು ಕಾರ್ಯಗಳನ್ನು ಮಾಡಿದೆ. ಆದರೆ ಮಾಡಿದ ಕಾರ್ಯಗಳನ್ನು ನಿರ್ವಹಣೆ ಮಾಡುವಲ್ಲಿ ಎಡವಿದೆ ಎಂಬ ಮಾತು ಕೇಳಿ ಬರುತ್ತಿವೆ.
ನೀರು ಉಳಿಸಿ, ಎಂಬ ಸಂದೇಶವನ್ನು ಊರಿಗೆ ಸಾರಬೇಕಾದ ಗ್ರಾಮ ಪಂಚಾಯತ್ ಈ ರೀತಿ ನಿರ್ಲಕ್ಷಿಸಿದರೆ ಹೇಗೆ ಆಲ್ವಾ? ಇನ್ನು ಸತತವಾಗಿ ನೀರು ಈ ರೀತಿ ವ್ಯರ್ಥವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕಿದೆ.
Kshetra Samachara
14/05/2022 04:37 pm