ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಳೆಯಿಂದ ಸ್ಕೂಟಿ ತೇಲಿದ ವಿಡಿಯೋ ಹಳೆಯದಂತೆ: BRTS ಸ್ಪಷ್ಟನೆ

ಧಾರವಾಡ: ಗುರುವಾರ ಸಂಜೆ ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಟೋಲನಾಕಾ ಬಳಿ ಸ್ಕೂಟಿಯೊಂದು ಕೊಚ್ಚಿಕೊಂಡು ಹೋಗುತ್ತಿದ್ದ ವಿಡಿಯೋ ವರದಿ ನಮ್ಮಲ್ಲಿ ಪ್ರಸಾರವಾಗಿತ್ತು. ಆದರೆ, ವಾಸ್ತವವಾಗಿ ಆ ವೀಡಿಯೋ ನಿನ್ನೆಯದಲ್ಲ. ಇದೇ ರೀತಿ 2019ರಲ್ಲಿ ಸಂಭವಿಸಿದ ಮಳೆ ಅನಾಹುತದ ವೀಡಿಯೋ ಎಂದು BRTS ಸ್ಪಷ್ಟನೆ ನೀಡಿದೆ.

ಪಬ್ಲಿಕ್ ನೆಕ್ಸ್ಟ್ ಮಾಧ್ಯಮದಲ್ಲಿ ಪ್ರಸಾರವಾದ ವಿಡಿಯೋ ಹಾಗೂ ಸುದ್ದಿಯಲ್ಲಿ, ಅನಾಹುತಕ್ಕೆ BRTS ಕಾರಣ ಎಂದೂ ಎಲ್ಲೂ ಹೇಳಿಲ್ಲ. ಆದರೂ ನೂರಾರು ಓದಗರು ಈ ಎಲ್ಲ ಅವಘಡಗಳಿಗೆ BRTS ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುತ್ತಿರುವುದರಿಂದ ತಾವು ಸ್ಪಷ್ಟನೆ ನೀಡಬೇಕಾಗಿದೆ ಎಂದು BRTS ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಪಬ್ಲಿಕ್ ನೆಕ್ಸ್ಟ್ ನಲ್ಲಿ ಈ ವೀಡಿಯೋ ಪ್ರಸಾರವಾಗುವ ಮುಂಚೆಯೇ ವಾಟ್ಸಪ್ ಹಾಗೂ ಫೇಸ್ಬುಕ್ ನಲ್ಲೂ ಇದೇ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೇ ಇಂದಿನ ಕೆಲವೊಂದಿಷ್ಟು ಪತ್ರಿಕೆಗಳಲ್ಲೂ ಸ್ಕೂಟಿ ಕೊಚ್ಚಿಕೊಂಡು ಹೋಗುತ್ತಿದ್ದ ಫೋಟೋ ಕೂಡ ಬಂದಿದೆ. ಆದರೂ ಸಾರ್ವಜನಿಕರಲ್ಲಿ ಉಂಟಾದ ತಪ್ಪು ತಿಳುವಳಿಕೆ ದೂರ ಮಾಡಲು BRTS ವಿನಂತಿಸಿದ್ದರಿಂದ ಈ ಸ್ಪಷ್ಟನೆ ನೀಡಲಾಗಿದೆ.

Edited By :
Kshetra Samachara

Kshetra Samachara

06/05/2022 06:37 pm

Cinque Terre

11.78 K

Cinque Terre

2

ಸಂಬಂಧಿತ ಸುದ್ದಿ