ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಇಷ್ಟು ದಿನ ನೀರು ಸರಬರಾಜು ಮಾಡುತ್ತಿದ್ದ ಜಲಮಂಡಳಿ ಜವಾಬ್ದಾರಿಯನ್ನು ಎಲ್ ಆ್ಯಂಡ್ ಟಿ ಗೆ ಹಸ್ತಾಂತರ ಮಾಡಿದ್ದೇ ತಡ ಜಲಮಂಡಳಿ ಸಿಬ್ಬಂದಿ ಹೋರಾಟಕ್ಕೆ ಧುಮುಕಿದ್ದಾರೆ. ಆದರೆ ಸಿಬ್ಬಂದಿ ಹೋರಾಟದಿಂದ ಈಗ ಸಾರ್ವಜನಿಕರು ಪರದಾಡುವಂತಾಗಿದೆ.
ಹುಬ್ಬಳ್ಳಿಯ ವಾರ್ಡ್ ನಂಬರ 82 ರಲ್ಲಿ ಬರುವ ಸೋನಿಯಾ ಗಾಂಧಿನಗರದಲ್ಲಿ ವಾಟರ್ ಟ್ಯಾಂಕ್ ತುಂಬಿ ಹರಿದಿರುವ ಪರಿಣಾಮ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ. ಈಗಾಗಲೇ ಮಳೆಯಿಂದ ಆತಂಕಗೊಂಡಿರುವ ಜನರು ವಾಟರ್ ಟ್ಯಾಂಕ್ ತುಂಬಿ ನೀರು ಮನೆಗೆ ನುಗ್ಗುತ್ತಿರುವುದರಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.
ಅಲ್ಲದೇ ಸರಿಯಾದ ನಿರ್ವಹಣೆ ಕೊರತೆಯಿಂದ ಜನರು ಸಮಸ್ಯೆ ಸುಳಿಯಲ್ಲಿ ಸಿಲುಕಿಕೊಂಡು ಜೀವನ ನಡೆಸುವಂತಾಗಿದೆ.
ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಸೋನಿಯಾಗಾಂಧಿ ನಗರ ಜಲಮಂಡಳಿ ಹಾಗೂ ಎಲ್ ಆ್ಯಂಡ್ ಟಿ ಸಿಬ್ಬಂದಿಗಳ ನಿಷ್ಕಾಳಜಿ ಹಾಗೂ ಬೇಜವಾಬ್ದಾರಿತನದಿಂದ ಜನರು ಸಮಸ್ಯೆ ಅನುಭವಿಸುವಂತಾಗಿದೆ.
ವಾಟರ್ ಟ್ಯಾಂಕ್ ಗೆ ನೀರು ತುಂಬಿಸಿ ಸರಿಯಾದ ರೀತಿಯಲ್ಲಿ ಬಂದ್ ಮಾಡುವುದನ್ನು ಬಿಟ್ಟು ಅನಾವಶ್ಯಕವಾಗಿ ಸಮಸ್ಯೆ ಸೃಷ್ಟಿ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಮನೆಗೆ ನೀರು ನುಗ್ಗುವುದರಿಂದ ಜನರು ಪಾಲಿಕೆ ಹಾಗೂ ಜಲಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏಕಾಏಕಿ ಮನೆಗೆ ನೀರು ನುಗ್ಗುವುದರಿಂದ ಜನರು ಎಲ್ಲಿ ಹೋಗಿ ನಾವು ಜೀವನ ನಡೆಸಬೇಕು ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳು ಇದ್ದಾವೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ. ಇನ್ನಾದರೂ ಮಹಾನಗರ ಪಾಲಿಕೆ ವ್ಯವಸ್ಥಿತ ರೀತಿಯಲ್ಲಿ ನಿರ್ವಹಣೆ ಮಾಡಲಿ ಎನ್ನುವುದು ಎಲ್ಲರ ಒತ್ತಾಸೆಯಾಗಿದೆ.
Kshetra Samachara
30/04/2022 05:13 pm