ಕುಂದಗೋಳ : ತಾಲೂಕಿನ ಬೆಟದೂರ ಗ್ರಾಮದಲ್ಲಿ ಪ್ರಧಾನ ಮಂತ್ರಿ ಭೀಮಾ ಫಸಲ್ ಯೋಜನೆ ಕುರಿತಂತೆ ರೈತರಿಗೆ ಪಾಠಶಾಲಾ ಎಂಬ ತರಬೇತಿ ನೀಡಿ ಭೀಮಾ ಕಂಪನಿಯವರು ರೈತರನ್ನು ಜಾಗೃತಿ ಮಾಡುವ ಕಾರ್ಯಕ್ರಮ ಯಶಸ್ವಿಯಾಗಿದೆ.
ಹೌದು ! ಈಗಾಗಲೇ ಮುಂಗಾರು ಬಿತ್ತನೆ ಕಾರ್ಯ ಆರಂಭವಾಗುವ ಸಮಯ ಒದಗಿದ್ದು ರೈತರು ಭೂಮಿಗೆ ಹಾಕಿದ ಬೀಜ ಅತಿವೃಷ್ಟಿ ಅನಾವೃಷ್ಟಿ ಸಿಲುಕಿದರೂ ಪರಿಹಾರ ಪಡೆಯಲು ತಮ್ಮ ತಮ್ಮ ಖಾತೆ ಪತ್ರ ಪಹಣಿ ಆಧಾರದ ಮೇಲೆ ಪ್ರಧಾನ ಮಂತ್ರಿ ಭೀಮಾ ಫಸಲ್ ಯೋಜನೆ ಬಳಸಿಕೊಳ್ಳಿ ಬೆಳೆ ಹಾಳಾದರೂ ತಮಗೆ ಪರಿಹಾರ ದೊರೆಯುತ್ತದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕುಂದಗೋಳ ತಾಲೂಕಿನ ಬೆಟದೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಯ ರೈತರು ಉಪಸ್ಥಿತರಿದ್ದರು. ಪ್ರಧಾನ ಮಂತ್ರಿ ಭೀಮಾ ಫಸಲ್ ಯೋಜನೆ ಮಾಹಿತಿ ಪಡೆದುಕೊಂಡರು.
Kshetra Samachara
26/04/2022 01:25 pm