ಕುಂದಗೋಳ: ಪ್ರಯಾಣಿಕರಿಗಾಗಿ ಕೂರಲು ನಿರ್ಮಿಸಿದ ಶೆರೇವಾಡ ಗ್ರಾಮದ ಹಳೆಯ ಬಸ್ ನಿಲ್ದಾಣವೊಂದು ಕಳೆದ ಹಲವಾರು ವರ್ಷಗಳಿಂದ ಹಗಲು ರಾತ್ರಿ ಕುಡುಕರ ಅಡ್ಡೆಯಾಗಿ ಉಪಯೋಗಕ್ಕೆ ಬಾರದ ಸ್ಥಿತಿ ತಲುಪಿದೆ.
ಹೌದು ! ಈ ರೀತಿ ಸಾರಾಯಿ ಪೌಚ್‌ಗಳಿಂದಲೇ ಸಂಪೂರ್ಣ ಭರ್ತಿಯಾದ ಬಸ್ ನಿಲ್ದಾಣ ಹಾಗೂ ಹೊರಗಡೆ ಎಲ್ಲೆಂದರಲ್ಲಿ ಬಿದ್ದಿರುವ ಬಿಯರ್ ಬಾಟಲಿ, ಪ್ಲಾಸ್ಟಿಕ್ ತ್ಯಾಜ್ಯ ದುರ್ವಾಸನೆ ಜನತೆಗೆ ತಲೆ ನೋವಾಗಿ ಪರಿಣಮಿಸಿ ಗೌರವಸ್ಥರಿಗೆ ಇಲ್ಲಿ ಹಗಲು ರಾತ್ರಿ ಸಂಚಾರ ಭಯ ತಂದಿದೆ.
ಇನ್ನೂ ಬಸ್ ನಿಲ್ದಾಣದ ಗೋಡೆ ಕಿಟಕಿ ಹಾಗೂ ಜನ ಕೂರುವ ಕಟ್ಟೆಗಳನ್ನು ಬಿಡದೆ ಎಲ್ಲೆಂದರಲ್ಲಿ ಮದ್ಯ ಕುಡಿದು ಪೌಚ್ ಇಡಲಾಗಿದೆ. ಇದು ನಿತ್ಯವೂ ಕುಡುಕರ ಅಡ್ಡೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾಗಿಲ್ಲ ಬಿಡಿ. ಹುಬ್ಬಳ್ಳಿ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಪಕ್ಕವೇ ಇರುವ ಈ ಬಸ್ ನಿಲ್ದಾಣದ ಕುಡುಕರು ಪೊಲೀಸ್ ಪೆಟ್ರೋಲಿಂಗ್ ಸಂದರ್ಭದಲ್ಲಿ ಕಂಡು ಬಂದಿಲ್ವಾ ಎನ್ನುವುದು ಸಂಶಯ ಈ ಬಗ್ಗೆ ಸೂಕ್ತ ಕ್ರಮ ಅಗತ್ಯವಾಗಿದೆ.
Kshetra Samachara
25/04/2022 09:04 pm