ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಪಬ್ಲಿಕ್ ನೆಕ್ಸ್ಟ್ ಇಂಪಾಕ್ಟ್; ತಹಶೀಲ್ದಾರರಿಂದ ವಾಹನಗಳ ತೆರವು

ನವಲಗುಂದ: "ಇದನ್ನು ಗುಜರಿ ಅಡ್ಡೆ ಅನ್ಕೊಂಡ್ರಾ, ಅಲ್ಲಲ್ಲ ಇದು ಹಳೇ ತಾಲೂಕ ಕಚೇರಿ" ಎನ್ನುವ ಶೀರ್ಷಿಕೆ ಅಡಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಕಳೆದ ಮೂರು ದಿನಗಳ ಹಿಂದೆಯಷ್ಟೇ ಸುದ್ದಿಯನ್ನು ಪ್ರಸಾರ ಮಾಡಿತ್ತು. ಇದಕ್ಕೆ ಸ್ಪಂದಿಸಿದ ತಹಶೀಲ್ದಾರ್ ಅನಿಲ ಬಡಿಗೇರ ಅವರು ಹಳೇ ತಾಲೂಕು ಕಚೇರಿಯ ಆವರಣದಲ್ಲಿನ ವಾಹನಗಳ ತೆರವು ಮಾಡಿಸಿದ್ದಾರೆ.

ಎಸ್. ಅಪಘಾತಕ್ಕೊಳಗಾದ ವಾಹನಗಳು ಹಾಗೂ ಸೀಸ್ ಮಾಡಲಾದ ವಾಹನಗಳನ್ನು ಆವರಣದಲ್ಲಿ ನಿಲ್ಲಿಸಲಾಗಿತ್ತು. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಸುದ್ದಿ ಬಿತ್ತರಿಸಿ, ತಹಶೀಲ್ದಾರ್ ಅನಿಲ ಬಡಿಗೇರ ಅವರ ಗಮನಕ್ಕೂ ತಂದಿತ್ತು. ಇದಕ್ಕೆ ಸ್ಪಂದಿಸಿದ ಅವರು, ನವಲಗುಂದ ಪೊಲೀಸ್ ಠಾಣೆಗೆ ನೋಟೀಸ್ ನೀಡಿದ ಹಿನ್ನೆಲೆ ಸಿಪಿಐ ಚಂದ್ರಶೇಖರ ಮಠಪತಿ ಅವರು ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಸಂಪೂರ್ಣ ಆವರಣದಲ್ಲಿನ ವಾಹನಗಳನ್ನು ತೆರವು ಮಾಡಿದ್ದಾರೆ.

ಇನ್ನು ಆವರಣದ ಸ್ವಚ್ಛತೆ ಮಾಡಿ, ನಿರ್ವಹಣೆ ಸಹ ಮಾಡಿದ್ದಲ್ಲಿ ಐತಿಹಾಸಿಕ ಹಳೇ ತಾಲೂಕು ಕಚೇರಿ ಒಂದು ಮಾದರಿ ಕಚೇರಿ ಆಗುವುದರಲ್ಲಿ ಸಂಶಯವೇ ಇಲ್ಲಾ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇನ್ನು ತಹಶೀಲ್ದಾರ್ ಅನಿಲ ಬಡಿಗೇರ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ಸಹ ವ್ಯಕ್ತವಾಗುತ್ತಿದೆ.

-ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Shivu K
Kshetra Samachara

Kshetra Samachara

24/04/2022 05:14 pm

Cinque Terre

103.57 K

Cinque Terre

5

ಸಂಬಂಧಿತ ಸುದ್ದಿ