ಕುಂದಗೋಳ: ತಾಂತ್ರಿಕ ಸಮಸ್ಯೆಯ ಕಾರಣ ಗುಡಗೇರಿ ಗ್ರಾಮದಲ್ಲಿನ ರೈಲ್ವೆ ಗೇಟ್ ಹಾಕಿದ ಮೇಲೆ ತೆರೆಯಲು ಗೇಟ್ ಮ್ಯಾನ್ ಗೆ ನಿತ್ಯ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ.
ಹೌದು ! ಗುಡಗೇರಿ ರೈಲ್ವೆ ಸ್ಟೇಷನ್ ಬಳಿಯ ಗೇಟ್ ಕಳೆದ ತಿಂಗಳಿಂದ ದುರಸ್ತಿ ಹಂತದಲ್ಲಿದೆ. ಇಲ್ಲಿ ಗೇಟ್ ಹಾಕಬಹುದು, ಮರಳಿ ಗೇಟ್ ತೆರೆಯಲು ಸಾರ್ವಜನಿಕರ ಸಹಾಯ ಗೇಟ್ ಮ್ಯಾನ್ ಗೆ ಬೇಕೆ ಬೇಕು. ಅಲ್ಲದೇ ಗೇಟ್ ಓಪನ್ ಮಾಡೋಕೆ ತುಂಬಾ ಸಮಯ ಕೂಡಾ ಹಿಡಿಯುತ್ತೆ. ಕಳೆದ ಕೆಲವು ದಿನಗಳ ಹಿಂದೆ ರೋಗಿ ಹೊತ್ತು ಬಂದ ಆಂಬುಲೆನ್ಸ್ ಸಹ ಇಲ್ಲಿ ಸಿಲುಕಿ ಸಮಸ್ಯೆ ಎದುರಿಸಿದೆ. ಹಾಗಾಗಿ ರೈಲ್ವೇ ಅಧಿಕಾರಿಗಳು ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಬೇಕು ಅಂತ ಸಾರ್ವಜನಿಕರು ಆಗ್ರಹಿಸಿದ್ದಾರೆ.
Kshetra Samachara
20/04/2022 03:56 pm