ಹುಬ್ಬಳ್ಳಿ: ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಹುಬ್ಬಳ್ಳಿಯಲ್ಲಿ ಸುಮಾರು ದಿನಗಳಿಂದ ಬಂದ್ ಆಗಿದ್ದ ಲಗೇಜ್ ಸ್ಕ್ಯಾನರ್ ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಮತ್ತೇ ಕಾರ್ಯಾರಂಭ ಮಾಡಿದ್ದು, ಪಬ್ಲಿಕ್ ನೆಕ್ಸ್ಟ್ ವರದಿಯ ಬಿಗ್ ಇಂಪ್ಯಾಕ್ಟ್ ಇದಾಗಿದೆ.
ಹೌದು,ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಸ್ಪೋಟಕ ವಸ್ತುವೊಂದು ಸ್ಪೋಟಗೊಂಡ ಬೆನ್ನಲ್ಲೇ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು. ಆದರೆ ರೈಲ್ವೆ ಇಲಾಖೆ ಕೆಲವು ದಿನ ಮಾತ್ರ ಬಿಗಿ ಭದ್ರತೆಯನ್ನು ಕೈಗೊಂಡು ಆ ಬಳಿಕ ಲಗೇಜ್ ಸ್ಕ್ಯಾನರ್ ಬಂದ್ ಮಾಡಿತ್ತು. ಈ ಕುರಿತು ಪಬ್ಲಿಕ್ ನೆಕ್ಸ್ಟ್ ಅಭದ್ರತೆ ಬಗ್ಗೆ ವಿಶೇಷ ವರದಿಯೊಂದನ್ನು ಬಿತ್ತರಿಸಿತ್ತು.
ವರದಿಗೆ ಎಚ್ಚೆತ್ತುಕೊಂಡ ನೈಋತ್ಯ ರೈಲ್ವೆ ವಲಯ ಹೊಸ ಲಗೇಜ್ ಸ್ಕ್ಯಾನರ್ ಅಳವಡಿಸಿ ಪ್ರಯಾಣಿಕರ ಲಗೇಜ್ ತಪಾಸಣೆ ಮಾಡುವ ಮೂಲಕ ಬಿಗಿ ಭದ್ರತೆ ನಿಯೋಜನೆ ಮಾಡಿದ್ದಾರೆ.
ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿಯ ಸದ್ಗುರು ಸಿದ್ಧಾರೂಢರ ರೈಲ್ವೆ ನಿಲ್ದಾಣಕ್ಕೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಹೊಸ ಸ್ಕ್ಯಾನರ್ ಬಂದಿದ್ದು, ಪಬ್ಲಿಕ್ ನೆಕ್ಸ್ಟ್ ಕಾರ್ಯಕ್ಕೆ ಎಲ್ಲೆಡೆಯೂ ಸಾರ್ವಜನಿಕ ಪ್ರಶಂಸೆ ವ್ಯಕ್ತವಾಗುತ್ತಿದೆ.
Kshetra Samachara
15/04/2022 01:29 pm