ಹುಬ್ಬಳ್ಳಿ: ಅದು ವಾಣಿಜ್ಯನಗರಿ ಹುಬ್ಬಳ್ಳಿಯ ಮಹತ್ವಪೂರ್ಣ ಯೋಜನೆಯಲ್ಲಿ ಒಂದಾಗಿರುವ ಕಾಮಗಾರಿ. ಈ ಕಾಮಗಾರಿಯಿಂದ ಹುಬ್ಬಳ್ಳಿಯ ವಿನ್ಯಾಸವೇ ಸಂಪೂರ್ಣ ಬದಲಾಗಲಿದೆ. ವಾಣಿಜ್ಯನಗರಿ ಖ್ಯಾತಿಗೆ ಕಿರೀಟ್ ಇಟ್ಟಂತೆ ಈ ಯೋಜನೆ ತಲೆ ಎತ್ತಲಿದೆ. ಆದರೆ ಈ ಕಾಮಗಾರಿ ಮಾತ್ರ ಚುರುಕುಗೊಂಡಿಲ್ಲ. ಹೀಗಾಗಿ ತಲೆ ಎತ್ತಬೇಕಿದ್ದ ನೆಹರು ಮೈದಾನ ಅವ್ಯವಸ್ಥೆಯಿಂದ ತಲೆ ತಗ್ಗಿಸುವಂತಾಗಿದೆ.
ಹುಬ್ಬಳ್ಳಿ-ಧಾರವಾಡ ಅವಳಿನಗರವನ್ನು ಸ್ಮಾರ್ಟ್ ಮಾಡಲು ಕೈಗೆತ್ತಿಕೊಂಡಿರುವ ಸ್ಮಾರ್ಟ್ ಸಿಟಿ ಯೋಜನೆ ತಕ್ಕಮಟ್ಟಿಗೆ ಇಲ್ಲಿನ ಜನರಿಗೆ ಉಪಯೋಗವಾಗಿದೇ ನಿಜ. ಆದರೆ ಹು-ಧಾ ಮಹಾನಗರ ಪಾಲಿಕೆಯ ನೆಹರು ಮೈದಾನಕ್ಕೆ ಮಾತ್ರ ಸ್ಮಾರ್ಟ್ ಸಿಟಿ ಯೋಜನೆ ನಿರ್ಲಕ್ಷ್ಯ ತೋರುತ್ತಿದೆ. ಹುಬ್ಬಳ್ಳಿ ಆಟಗಾರರ ಹಾಗೂ ಸಾರ್ವಜನಿಕರ ಬಹು ನಿರೀಕ್ಷಿತ ನೆಹರು ಮೈದಾನದ ಸ್ಮಾರ್ಟ್ ಸಿಟಿ ಕಾಮಗಾರಿ ಆರಂಭವಾಗಿ ಸುಮಾರು ದಿನಗಳೇ ಕಳೆದರೂ ಇದುವರೆಗೂ ಇಲ್ಲಿನ ಅವ್ಯವಸ್ಥೆ ನೋಡಿದರೇ ಸುಧಾರಿಸಲು ಸುಮಾರು ತಿಂಗಳುಗಳೇ ಬೇಕಾಗಬಹುದು ಎಂಬುವಂತಿದೆ. ಹಾಗಿದ್ದರೇ ನೀವೆ ನೋಡಿ ಇಲ್ಲಿನ ವ್ಯವಸ್ಥೆ.
ಸುಮಾರು 21.44 ಕೋಟಿ ವೆಚ್ಚದಲ್ಲಿ ನೆಹರು ಮೈದಾನವನ್ನು ಸ್ಮಾರ್ಟ್ ಮಾಡಿ ಸಿಂಥೆಟಿಕ್ ಗ್ರೌಂಡ್ ಆಗಿ ಮಾರ್ಪಡಿಸುವ ಕುರಿತು ಚಿಂತನೆ ನಡೆಸಲಾಗಿತ್ತು. ಮತ್ತೆ ಐದು ಕೋಟಿ ಹೆಚ್ಚುವರಿ ಹಣ ಬೇಕಿರುವ ಹಿನ್ನೆಲೆಯಲ್ಲಿ ಸಿಂಥೆಟಿಕ್ ಟ್ರ್ಯಾಕ್ ಮಾಡುವ ನಿರ್ಧಾರವನ್ನು ಕೈ ಬಿಟ್ಟಿರುವುದು ನಿಜಕ್ಕೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಸ್ಮಾರ್ಟ್ ಸಿಟಿಯಲ್ಲಿ ಸ್ಮಾರ್ಟ್ ಆಗಬೇಕಿದ್ದ ನೆಹರು ಮೈದಾನ ಇಷ್ಟು ದಿನಗಳಾದರೂ ಸ್ಮಾರ್ಟ್ ಆಗಿಲ್ಲ.
ಸುಮಾರು ದಿನಗಳಿಂದ ಕನಸು ಕಟ್ಟಿಕೊಂಡಿದ್ದ ಕ್ರೀಡಾ ಪಟುಗಳಿಗೆ ಇದುವರೆಗೂ ಕಾಮಗಾರಿ ಪೂರ್ಣಗೊಳ್ಳದೇ ಇರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/03/2022 08:18 pm