ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಇಂಧನ ಬೆಲೆ ಏರಿಕೆಗೆ ತತ್ತರಿಸಿದ ಸಾರಿಗೆ ಸಂಸ್ಥೆ: ಡಿಸೇಲ್ ಗಾಗಿ ಬೀದಿಗಿಳಿದ ಬಸ್!

ವರದಿ-ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

ಹುಬ್ಬಳ್ಳಿ: ಇಂಧನ ಬೆಲೆ ಏರಿಕೆ ಸಾರ್ವಜನಿಕರಿಗೆ ಮಾತ್ರವಲ್ಲದೆ ಸಾರಿಗೆ ಸಂಸ್ಥೆಗಳಿಗೂ ದೊಡ್ಡ ಪ್ರಮಾಣದಲ್ಲಿ ಹೊಡೆತ ಬಿದ್ದಿದ್ದು, ಸಾರಿಗೆ ಸಂಸ್ಥೆ ಬಸ್ ಗಳ ಇಂಧನಕ್ಕಾಗಿ ಬೀದಿಗೆ ಬರುವಂತ ಸ್ಥಿತಿ ನಿರ್ಮಾಣವಾಗಿದೆ. ಹಾಗಿದ್ದರೇ ಇಲ್ಲಿ ಆಗಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ.

ಸಾರಿಗೆ ಸಂಸ್ಥೆಗಳ ಪುನಶ್ವೇತನಕ್ಕೆ ಸರ್ಕಾರ ಕಸರತ್ತು ನಡೆಸಿರುವಾಗಲೇ ಸಗಟು ಗ್ರಾಹಕರಾಗಿರುವ ಸಾರಿಗೆ ಸಂಸ್ಥೆಗಳಿಗೆ ಡೀಸೆಲ್ ದರ ಹೆಚ್ಚಳ ದೊಡ್ಡ ಹೊಡೆತ ನೀಡಿದೆ. ಸಗಟು ಗ್ರಾಹಕರಿಗೆ ಪ್ರತಿ ಲೀಟರ್‌ಗೆ 21 ರೂ. ಹೆಚ್ಚಳವಾಗಿದ್ದು, ಡಿಸ್ಕೌಂಟ್ ಕಳೆದರೂ ಪ್ರತಿ ಲೀಟರ್ ಗೆ 21ರೂ. ಹೊರೆ ಬೀಳುತ್ತಿದೆ. ಈ ಸಂಕಷ್ಟದಿಂದ ಪಾರಾಗಲು ಹೊರಗಿನ ಬಂಕ್‌ಗಳಿಂದ ಡೀಸೆಲ್ ಹಾಕಿಸುವುದಕ್ಕೆ ಸಾರಿಗೆ ಸಂಸ್ಥೆ ಮುಂದಾಗಿದ್ದು, ಹುಬ್ಬಳ್ಳಿಯ ವಾಯುವ್ಯ ಸಾರಿಗೆ ಘಟಕದ ಬಸ್ ಖಾಸಗಿ ಬಂಕ್ ಗಳಲ್ಲಿ ಇಂಧನ ತುಂಬಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಿವೆ. ಸಾರಿಗೆ ಸಂಸ್ಥೆಗಳು ನೌಕರರ ವೇತನದಷ್ಟೇ ಹಣವನ್ನು ಡೀಸೆಲ್‌ಗಾಗಿ ಪ್ರತಿ ತಿಂಗಳು ವ್ಯಯಿಸುತ್ತಿದೆ. ನಿತ್ಯವೂ ತೈಲ ಹೆಚ್ಚಳದಿಂದಾಗಿ ಸಂಸ್ಥೆಗಳ ನಷ್ಟದ ಪ್ರಮಾಣ ಹೆಚ್ಚುತ್ತಿದೆ. ನಿತ್ಯ 12 ಲಕ್ಷ ಲೀಟರ್‌ಗೂ ಹೆಚ್ಚು ಡೀಸೆಲ್ ಬಳಸುತ್ತಿದ್ದು, ಈ ಹಂತದಲ್ಲಿ ಪ್ರತಿ ಲೀಟರ್‌ಗೆ 21 ರೂ.ಹೊರೆ ಮತ್ತಷ್ಟು ನಷ್ಟಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಹೊರಗಿನ ಬಂಕ್ ಗಳಲ್ಲಿ ಪ್ರತಿ ಲೀಟರ್‌ಗೆ 21 ರೂ. ಕಡಿಮೆಯಾಗುವುದರಿಂದ ಖಾಸಗಿ ಬಂಕ್ ಗಳಲ್ಲಿ ಹಾಕಿಸುವ ನಿರ್ಧಾರಕ್ಕೆ ಬಂದಿದೆ.

ಇಂಧನದ ಬೆಲೆ ಏರಿಕೆಯಿಂದ ಸಾರ್ವಜನಿಕರು ಮಾತ್ರವಲ್ಲದೆ ಸಾರಿಗೆ ಸಂಸ್ಥೆಗಳೇ ತತ್ತರಿಸಿ ಹೋಗುತ್ತಿದ್ದು, ಇಷ್ಟು ದಿನ ಡಿಪೋಗಳಲ್ಲಿ ಇಂಧನ ಹಾಕಿಸುತ್ತಿದ್ದ ಬಸ್ ಈಗ ಬೀದಿಗೆ ಬಂದು ಸರದಿ ಸಾಲಿನಲ್ಲಿ ನಿಂತುಕೊಂಡು ಇಂಧನ ಹಾಕಿಸಿಕೊಳ್ಳುವಂತಾಗಿದೆ. ಈಗ ಸಾರಿಗೆ ಸಂಸ್ಥೆ ಬಸ್ ಖಾಸಗಿ ಬಂಕ್ ಗಳತ್ತ ಮುಖ ಮಾಡಿದ್ದು, ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿದೆ.

ಒಟ್ಟಿನಲ್ಲಿ ಡಬಲ್ ಇಂಜಿನ್ ಸರ್ಕಾರದ ಬೆಲೆ ಏರಿಕೆಯಿಂದ ಸಾರಿಗೆ ಸಂಸ್ಥೆ ಮಾತ್ರವಲ್ಲದೆ ಜನರೂ ಕೂಡ ದೊಡ್ಡಮಟ್ಟದ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನವೂ ಬೆಲೆ ಏರಿಕೆ ಹೊಡೆತ ಸುಧಾರಿಸಿಕೊಳ್ಳಲು ಆಗದೆ ಸಾರಿಗೆ ಸಂಸ್ಥೆ ಬಸ್ ಬೀದಿಗೆ ಬರುವಂತಾಗಿದೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

26/03/2022 10:05 pm

Cinque Terre

85.97 K

Cinque Terre

21

ಸಂಬಂಧಿತ ಸುದ್ದಿ