ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಬ್ರಿಡ್ಜ್ ಕಾಮಗಾರಿ ಮುಗಿಲಿಲ್ಲ, ಜನರಿಗೆ ತಾಪತ್ರಯ ತಪ್ಪಿಲ್ಲ

ಕುಂದಗೋಳ: ಹುಬ್ಬಳ್ಳಿ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಶಿರೂರು ಬ್ರಿಡ್ಜ್ ಕಾಮಗಾರಿಯು ಮಾರ್ಚ್ 16ಕ್ಕೆ ಮುಗಿಯಲಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪ್ರಕಟಣೆ ನೀಡಿದ್ದರು. ಆದರೆ ಇಂದಿಗೂ ಕಾಮಗಾರಿ ಅದೇ ಹಂತದಲ್ಲಿದೆ.

ಹೌದು! ಶಿರೂರು ಬ್ರಿಡ್ಜ್ ಕಾಮಗಾರಿ ಪ್ರಗತಿ ಹಂತದಲ್ಲಿರುವ ಕಾರಣ, ವಾಹನ ಸವಾರರ ಪರದಾಟ ತಪ್ಪಿಲ್ಲ. ಈಗಾಗಲೇ ತಮ್ಮ ಹೊಲದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ ರೈತರ ಹೊಲದಲ್ಲಿ ಲಾರಿಯೊಂದು ಅಡ್ಡವಾಗಿ ಸಿಲುಕಿದ ಪರಿಣಾಮ ಪರ್ಯಾಯ ರಸ್ತೆ ಬಂದ್ ಆಗಿ ಜನರಿಗೆ ಸಮಸ್ಯೆ ಉಂಟಾಗಿದೆ. ಈ ಪರಿಣಾಮ ಶಿರೂರು ಬ್ರಿಡ್ಜ್ ಬಳಿ ವಾಹನಗಳು ಸಂಚಾರಕ್ಕೆ ದಾರಿ ಇರದೇ ಸವಾರರು ಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆಯಲ್ಲಿ ಲಾರಿ ಸಿಲುಕಿ ರಸ್ತೆ ಬಂದ್ ಆದ ವಿಡಿಯೋವನ್ನು ಪಬ್ಲಿಕ್ ನೆಕ್ಸ್ಟ್'ಗೆ ಕಳುಹಿಸಿದ ವಾಹನ ಸವಾರರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ ಬೇಗ ಬ್ರಿಡ್ಜ್ ಕಾಮಗಾರಿ ಮುಗಿಸಿ ಎಂದಿದ್ದಾರೆ.

Edited By : Shivu K
Kshetra Samachara

Kshetra Samachara

22/03/2022 09:05 am

Cinque Terre

32.7 K

Cinque Terre

0

ಸಂಬಂಧಿತ ಸುದ್ದಿ