ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಿಗುತ್ತಿಲ್ಲ ಸೌಲಭ್ಯಗಳು..ಸರ್ಕಾರದ ವಿರುದ್ಧ ಗರಂ ಆದ ಹಿರಿಯ ನಾಗರಿಕರು

ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ: ಕುಂಟುತ್ತಿರುವ ಸರ್ಕಾರದ ಮಂದ ಕಿವಿಗಳಿಗೆ ಹಿರಿಯ ನಾಗರಿಕರ ಅಳಲು ಕೇಳುತ್ತಿಲ್ಲ. ಹಾಗಾಗಿ ನಾವು ಬರುವ ಚುನಾವಣೆಯಲ್ಲಿ ನಮ್ಮ ತಾಖತ್ತು ಏನೆಂದು ನಾವು ತೋರಿಸುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಹಿರಿಯ ನಾಗರಿಕರು ಗುಡುಗಿದ್ದಾರೆ.

ಹೀಗೆ ಒಂದು ಕಡೆ ನಿಂತುಕೊಂಡು ಸರ್ಕಾರದ ವಿರುದ್ಧ ಗರಂ ಆಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿರುವ ಇವರೆಲ್ಲರೂ, ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರು ಮತ್ತು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಯವರು.

ಈ ಹಿರಿಯ ನಾಗರಿಕರು ಸರ್ಕಾರಕ್ಕೆ ಸುಮಾರು ವರ್ಷಗಳಿಂದ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ನೀಡಿದ್ದಾರೆ. ಆದರೆ ಸರ್ಕಾರ ಮಾತ್ರ ಇವರ ಬಗ್ಗೆ ನಿಗಾವಹಿಸದಿರುವುದಕ್ಕೆ ಗರಂ ಆಗಿದ್ದಾರೆ.ಈ ಬಾರಿ ಸರ್ಕಾರ ನಮ್ಮ ಬೇಡಿಕೆಗಳನ್ನು ಪೂರೈಸದಿದ್ದರೆ ಮುಂದಿನ ಚುನಾವಣೆಗೆ ನಮ್ಮ ತಾಖತ್ ಏನು ಎಂಬುದನ್ನು ತೋರಿಸುತ್ತೇವೆ ಎಂದು ಪಣತೊಟ್ಟಿದ್ದಾರೆ.

ಒಟ್ಟಿನಲ್ಲಿ ಸರ್ಕಾರಕ್ಕೆ ಅದೆಷ್ಟೋ ಬಾರಿ ಮನವರಿಕೆ ಮಾಡಿದರೂ ಕೂಡ, ಕೇವಲ ಭರವಸೆ ನೀಡುತ್ತಿದ್ದಾರೆ. ಆದ ಕಾರಣ ಎಪ್ರಿಲ್ ತಿಂಗಳಲ್ಲಿ ಬೃಹತ್ ಸಮಾವೇಶ ಮಾಡಿ ಸರ್ಕಾರಕ್ಕೆ ಕೊನೆಯ ಬಾರಿಗೆ ಮನವಿ ಸಲ್ಲಿಸುತ್ತೆವೆ.

ಕೂಡಲೆ ಬೇಡಿಕೆಗಳನ್ನು ಈಡೇರಿಸದಿದ್ದರೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ವಾರ್ನಿಂಗ್ ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

02/03/2022 02:42 pm

Cinque Terre

43.24 K

Cinque Terre

11

ಸಂಬಂಧಿತ ಸುದ್ದಿ