ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ರಸ್ತೆ ಸಂಕಷ್ಟ : ವಾಹನ ಸವಾರರೇ ಎಚ್ಚರ ಯಾಮಾರಿದ್ರೆ ಹರೋಹರ

ಹುಬ್ಬಳ್ಳಿ: ಅದು ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ. ಆದರೆ ಈ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಅವಳಿನಗರದಲ್ಲಿ ಅವೈಜ್ಞಾನಿಕ ವ್ಯವಸ್ಥೆಯಿಂದ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.

ಹುಬ್ಬಳ್ಳಿ-ಧಾರವಾಡ ಮಧ್ಯದಲ್ಲಿ ಸಂಚರಿಸುವಾಗ ಸ್ವಲ್ಪ ಯಾಮಾರಿದರೂ ಸಂಕಷ್ಟ ಕಟ್ಟಿಟ್ಟ ಬುತ್ತಿ.

ಹೌದು ಹುಬ್ಬಳ್ಳಿ- ಧಾರವಾಡದಲ್ಲಿನ ರಸ್ತೆ ದುರವಸ್ಥೆ, ಕಸ ವಿಲೇವಾರಿಯಲ್ಲಿನ ವೈಫಲ್ಯಕ್ಕೆ ಸಾರ್ವಜನಿಕರು ನಿತ್ಯ ಹಿಡಿ ಶಾಪ ಹಾಕುತ್ತಿದ್ದಾರೆ.

ಇನ್ನು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿರುವ ಮಹಾನಗರ ಪಾಲಿಕೆ ಇದೀಗ ಅವೈಜ್ಞಾನಿಕ ರಸ್ತೆ ತಡೆ (ಹಂಪ್ಸ್)ಗಳಿಂದ ಮುಜುಗರಕ್ಕೆ ಈಡಾಗಿದೆ.

ಅವೈಜ್ಞಾನಿಕ ಹಂಪ್ ನಿರ್ಮಾಣಕ್ಕಾಗಿ ಸಾರ್ವಜನಿಕರು ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಈ ಬಗ್ಗೆ ಹುಬ್ಬಳ್ಳಿ ಪ್ರಿನ್ಸಿಪಲ್ ಸಿವಿಲ್ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಕೆಯಾಗಿದೆ.

ರಸ್ತೆ ತಡೆಗಳು ಪ್ರಯಾಣಿಕರ ಮೇಲೆ ಭಾರಿ ಪರಿಣಾಮ ಬೀರುತ್ತಿವೆ. ಬೆನ್ನು, ಸೊಂಟ, ಕುತ್ತಿಗೆ ನೋವಿನಿಂದ ಜನರು ಬಳಲುವಂತಾಗಿದೆ. ಈ ಬಗ್ಗೆ ಹಲವು ಬಾರಿ ಪಾಲಿಕೆಗೆ ಮನವಿ ಮಾಡಿಕೊಂಡಿದ್ರು ಪ್ರಯೋಜನವಾಗಿಲ್ಲ.

ಮಹಾನಗರದಲ್ಲಿ ರಸ್ತೆ, ಬ್ರಿಡ್ಜ್, ಸಬ್ ವೇ, ಏರುದಾರಿ ಹಾಗೂ ಕಟ್ಟಡಗಳ ನಿರ್ಮಾಣ, ನಿರ್ವಹಣೆ ಬದಲಾವಣೆ ಮಾಡುವುದು ಪಾಲಿಕೆಯ ಕರ್ತವ್ಯ ಎಂಬುದು ಕೆಎಂಸಿ ಆ್ಯಕ್ಟ್ 1976ರ ಸಬ್ ಸೆಕ್ಷನ್ 19ರಡಿ ಸ್ಪಷ್ಟವಾಗಿದೆ.

ಇದಕ್ಕಾಗಿ ಪಾಲಿಕೆಯು ವಾರ್ಷಿಕ ಬಜೆಟ್ ನಲ್ಲಿ ಹಣವನ್ನೂ ಮೀಸಲಿರಿಸಿರುತ್ತದೆ. ಆದರೆ, ಹು-ಧಾ ನಗರಗಳಲ್ಲಿ ಹಂಪ್ಸ್ ಗಳ ನಿರ್ಮಾಣದ ವೇಳೆ ಈ ನಿಯಮಗಳ ಉಲ್ಲಂಘನೆ ಆಗಿದೆ. ಸಿವಿಲ್ ಕಾಮಗಾರಿ ಕೈಗೊಂಡ ನಂತರ ಗುಣಮಟ್ಟ ಖಾತರಿಪಡಿಸಿಕೊಂಡ ನಂತರವೇ ಗುತ್ತಿಗೆದಾರರಿಗೆ ಬಿಲ್ ಪಾವತಿಸಬೇಕೆಂದಿದ್ದರೂ ಬಹುತೇಕ ರಸ್ತೆ ತಡೆಗಳು ಅವೈಜ್ಞಾನಿಕವಾಗಿರುವುದು ಖೇದದ ಸಂಗತಿ.

Edited By : Manjunath H D
Kshetra Samachara

Kshetra Samachara

17/02/2022 04:38 pm

Cinque Terre

24.58 K

Cinque Terre

2

ಸಂಬಂಧಿತ ಸುದ್ದಿ