ಹುಬ್ಬಳ್ಳಿ: ಶಿಗ್ಗಾಂವ ತಾಲೂಕಿನಲ್ಲಿ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ ಹಾಗೂ ಅಡಿಗಲ್ಲು ಸಮಾರಂಭವನ್ನು ಮಾಡುವಂತೆ, ಈಗಾಗಲೇ 25 ದಿನಗಳ ಕಾಲ ಧರಣಿ ಸತ್ಯಾಗ್ರಹ ಮಾಡಿದ್ದು, ಕೂಡಲೇ ಇದೇ ತಾಲೂಕಿನವರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ಮನವಿಗೆ ಸ್ಪಂದಿಸಬೇಕು ಎಂದು ಪುರಸಭೆ ಮಾಜಿ ಕೌನ್ಸಿಲರ್ ರೂಪಕ್ಕ ಬಾಲಪ್ಪ ಬಳ್ಳಾರಿ ಅವರು ಒತ್ತಾಯಿಸಿದರು.
ನಗರದಲ್ಲಿಂದು ಮಾತಾನಾಡಿದ ಅವರು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ಬಿಡುಗಡೆ ಮಾಡಿದ್ದಿರಿ. ಆದರೆ ನಮ್ಮ ಹೋರಾಟಕ್ಕೆ ನೀವು ಸ್ಪಂದಿಸುವ ಕೆಲಸ ಮಾಡಿಲ್ಲ, ನಾನು ಸುಮಾರು ವರ್ಷಗಳಿಂದ ಭಾರತ ರತ್ನ ಡಾ.ಬಿಆರ್ ಅಂಬೇಡ್ಕರ್ ಅವರ ಶಿಗ್ಗಾಂವ ತಾಲೂಕಿನ ಜನತಾ ಬಜಾರ್ ನಲ್ಲಿ ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡುವಂತೆ ಹೋರಾಟ ಮಾಡಿದ್ದು, ನೀಮ್ಮ ಭರವಸೆ ಕೇವಲ ಭರವಸೆಯಾಗಿ ಉಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆದ್ದರಿಂದ ಕೂಡಲೇ ನಮ್ಮ ಬೇಡಿಕೆ ಈಡೇರಿಸುಂತೆ ಒತ್ತಾಯ ಮಾಡಿದರು.
Kshetra Samachara
15/02/2022 02:03 pm