ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಒಂದೇ ತಪ್ಪನ್ನು ಎಷ್ಟು ಬಾರಿ ಮಾಡ್ತಿರಿ ಹೆಸ್ಕಾಂ & ಪ.ಪಂ ಅಧಿಕಾರಿಗಳೇ ?

ಕುಂದಗೋಳ : ಹೆಸ್ಕಾಂ ಅಧಿಕಾರಿಗಳೇ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳೇ ಒಂದೇ ತಪ್ಪನ್ನು ಎಷ್ಟು ಬಾರಿ ಮಾಡುತ್ತಿರಿ ? ಎಂದು ಜನಾ ನಿಮ್ಮನ್ನು ಪ್ರಶ್ನೆ ಮಾಡ್ತಾ ಇದ್ದಾರೆ.

ಕುಂದಗೋಳ ಪಟ್ಟಣದ ಕಾಳಿದಾಸನಗರದ ಬೀದಿ ದೀಪಗಳು ಹಗಲಲ್ಲೇ ಈ ರೀತಿ ಬೇಕಾಬಿಟ್ಟಿ ಬೆಳಗುತ್ತಿವೆ, ಈ ಹಿಂದೆ ಕಳೆದ ಮೂರ್ನಾಲ್ಕು ಬಾರಿ ಇದೇ ಸಮಸ್ಯೆ ಉಂಟಾಗಿ ಅದನ್ನು ಸರಿಪಡಿಸಿದ್ದೀರಿ, ಮತ್ತೀಗ ಪುನಃ ಅದೇ ಸಮಸ್ಯೆ ಮರುಕಳಿಸಿದ್ದು ಬೆಳಿಗ್ಗೆಯಿಂದಲೇ ಈ ರೀತಿ ಬೀದಿ ದೀಪಗಳು ಉರಿಯುತ್ತಾ ಅದೆಷ್ಟೋ ಯೂನಿಟ್ ವಿದ್ಯುತ್ ಪೋಲಾಗುತ್ತಿದೆ.

ಈ ವಿದ್ಯುತ್ ಪೋಲಾಗುವುದನ್ನು ಗಮನಿಸಿದ ಸ್ಥಳೀಯರು ಎಷ್ಟು ಬಾರಿ ಈ ಸಮಸ್ಯೆ ಎಂದು ತಮ್ಮಲ್ಲೇ ಮಾತನಾಡುತ್ತಿದ್ದಾರೆ, ಮಾನ್ಯ ಅಧಿಕಾರಿಗಳೇ ದಯವಿಟ್ಟು ಹಗಲಲ್ಲೇ ವಿದ್ಯುತ್ ಪೋಲಾಗುವುದನ್ನು ತಪ್ಪಿಸಿ, ಬೀದಿ ದೀಪ ಹಾಗೂ ವಿದ್ಯುತ್ ತಂತಿಗಳ ಸಮಸ್ಯೆಯನ್ನ ಸರಿಪಡಿಸಿ.

Edited By : Shivu K
Kshetra Samachara

Kshetra Samachara

28/01/2022 04:05 pm

Cinque Terre

25.93 K

Cinque Terre

0

ಸಂಬಂಧಿತ ಸುದ್ದಿ