ಹುಬ್ಬಳ್ಳಿ : ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪನವರೇ ನಿಮಗೆ ಈ ಹುಬ್ಬಳ್ಳಿಯಿಂದ ಹಳ್ಯಾಳಕ್ಕೆ ಪ್ರಯಾಣ ಮಾಡೋ ಸಾರ್ವಜನಿಕರ ಕಡೆಯಿಂದ ಧನ್ಯವಾದ ನೋಡ್ರಿ.
ಹೌದ ರೀ,! ನೀವೂ ಮತ್ತು ಈ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪಬ್ಲಿಕ್ ನೆಕ್ಸ್ಟ್ ವರದಿ ನೋಡಿ ಮಾಡಿದಂತಹ ಒಂದು ಕೆಲ್ಸಾ ಬಾಳ್ ಜನರಿಗೆ ಉಪಯೋಗ ಆಗೇತಿ.
ಆದ್, ರೀ ಕಳೆದ ತಿಂಗಳು ಈ ಹುಬ್ಬಳ್ಳಿ ಟು ಹಳ್ಯಾಳ ಸಂಪರ್ಕ ಮಾಡೋ ರಸ್ತೆ ಈ ಬ್ಯಾಸಿಗಿ ಒಳಗೆ, ಮೊಣಕಾಲಿನವರೆಗೆ ನೀರು ನಿಂತು ಸಂಚಾರಕ್ಕೆ ಸಮಸ್ಯೆ ಮಾಡಿ, ವಾಹನ ಸವಾರರು ಓಡಾದಂಗ ರಸ್ತೆ ಹಾಳಾಗಿತ್ತು. ಈ ಬಗ್ಗೆ ನಾವೂ ನಿಮ್ಮದೇ ಮತಕ್ಷೇತ್ರದ ಕಡೆ ಹಳ್ಳಿ ಹಳ್ಯಾಳ ಮಂದಿ ಕಷ್ಟದಾಗ ಅದಾರ್ ಅಂತ್ ಪರಿಸ್ಥಿತಿ ನಿಮಗೆ ತಿಳಿಸಿದ್ವಿ.
ಅದಕ್ ತಕ್ಕಂಗ್ ನೀವೂ ಹಾಳಾದ ರಸ್ತೆ ಸರಿಪಡಿಸಿ, ರಸ್ತೆ ಸಂಪೂರ್ಣ ಪ್ಯಾಚ್ ವರ್ಕ್ ಮಾಡಿಸಿ, ಅಕ್ಕಪಕ್ಕದ ಕಸ, ಕಡ್ಡಿ, ಗಂಟಿ, ಮುಳ್ಳು, ತಗಸಿ ಜನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿರಿ ಅದಕ್ಕೆ ಧನ್ಯವಾದ.
ಆದ್ರೇ, ಇವಾಗ್ ಪ್ಯಾಚ್ ವರ್ಕ್ ಮಾಡಿದ ರಸ್ತೆ ಮಳೆಗಾಲಕ್ಕೆ ಪೂರ್ತಿ ಹಾಳ ಅಕ್ಕತಿ, ದಯವಿಟ್ಟು ಈ ರಸ್ತೆ ಸಂಪೂರ್ಣ ಮುಂದಿನ ದಿನಗಳಲ್ಲಿ ಡಾಂಬರೀಕರಣ ಮಾಡಸ್ರೀ.
ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್
Kshetra Samachara
25/01/2022 08:58 am