ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಚಾಕಲಬ್ಬಿ ಗ್ರಾಪಂ ನೂತನ ಕಟ್ಟಡದ ಕನಸು ಇಂದು ನನಸು

ಕುಂದಗೋಳ : ನಮ್ಮ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಆಯ್ತೆಂಬ ಸಂಭ್ರಮ, ಎಲ್ಲೇಡೆ ತಳಿರು ತೋರಣ ಕಟ್ಟಿ ಸ್ವಾಗತ ಕೋರುವ ಜನ ಸಮೂಹ, ಮಕ್ಕಳ ಮಮತೆಯ ಸ್ವಾಗತ ಕೋರುವ ನೋಟ ಇದು ಹಬ್ಬವೇನು ಎನ್ನುವಂತಹ ಸುಖ ಬೋಜನ.

ಎಸ್.! ಇವೆಲ್ಲಾ ಸನ್ನಿವೇಶಗಳು ಕಂಡು ಬಂದಿದ್ದು, ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ,

ಕಳೆದ ಹಲವಾರು ವರ್ಷಗಳಿಂದ ಪಂಚಾಯಿತಿ ಕಟ್ಟಡ ಇಲ್ಲದೆ ಅಗತ್ಯ ಕೆಲಸಕ್ಕಾಗಿ ಬೇರೆ ಗ್ರಾಮಕ್ಕೆ ಸಂಚರಿಸುತ್ತಿದ್ದ ಚಾಕಲಬ್ಬಿ ಗ್ರಾಮಸ್ಥರಿಗೆ ಬುಳ್ಳಪ್ಪ ಪಕ್ಕೀರಪ್ಪ ಡೊಳ್ಳಿನ ಅವರ 5 ಗುಂಟೆ ಭೂದಾನ ಹಾಗೂ ರಾಜೀವ್ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಫಲದಲ್ಲಿ 40 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಕಟ್ಟಡವನ್ನು ವಿವಿಧ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರ ಅಮೃತ ಹಸ್ತದಿಂದ ಶಾಸಕಿ ಕುಸುಮಾವತಿ ಶಿವಳ್ಳಿ ಉಪಸ್ಥಿತಿಯಲ್ಲಿ ನೂತನ ಕಟ್ಟಡವನ್ನು ಉದ್ಘಾಟನೆ ಮಾಡಲಾಯಿತು.

ಈ ವೇಳೆ ಗ್ರಾಮ ಪಂಚಾಯಿತಿ ವತಿಯಿಂದ ಕೈಗೊಳ್ಳಲಾದ ಕಾಮಗಾರಿಗಳ ಭಿತ್ತಿ ಚಿತ್ರ ನೋಡುಗರ ಗಮನ ಸೆಳೆದ್ರೇ, ಗ್ರಾಮಸ್ಥರು ನೂತನ ಕಟ್ಟಡ ಉದ್ಘಾಟನೆ ಆಗಿದ್ದನ್ನು ಕಂಡು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕುಂದಗೋಳ ತಾಲೂಕಿನ ಪ್ರಮುಖರು, ತಾಪಂ ಅಧಿಕಾರಿಗಳು, ಗ್ರಾಪಂ ಅಧಿಕಾರಿಗಳು, ಸರ್ವ ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

22/01/2022 01:43 pm

Cinque Terre

15.24 K

Cinque Terre

0

ಸಂಬಂಧಿತ ಸುದ್ದಿ