ಕಲಘಟಗಿ: ಕೋವಿಡ್ -19 ಹಾಗೂ ಓಮಿಕ್ರೋನ್ ಸಾಂಕ್ರಾಮಿಕ ರೋಗ ಹರಡುತ್ತಿರುವದರಿಂದ ಕಲಘಟಗಿ ಪಟ್ಟಣದ ಬಸ್ ನಿಲ್ದಾಣವನ್ನು ಸಾರಿಗೆ ಸಿಬ್ಬಂದಿ ಸ್ವಚ್ಛಗೊಳಿಸಿದರು. ಬಸ್ ನಿಯಂತ್ರಣಧಿಕಾರಿ ಅವರೇ ಸ್ವತಃ ನಿಂತು ಬಸ್ ನಿಲ್ದಾಣದ ಒಳಗಡೆ ಪ್ರಯಾಣಿಕರು ಕುಳಿತುಕೊಳ್ಳುವ ಆಸನ, ಗೋಡೆಯ ಮೇಲೆ ವಿವಿಧ ಪೋಸ್ಟರ ಹಚ್ಚಿದ ಹಾಳೆಗಳನ್ನ ಕಿತ್ತು ನೀರಿನಿಂದ ತೊಳೆದು ಸ್ವಚ್ಛತಾ ಕಾರ್ಯ ಕೈಗೊಂಡರು.
ಬಸ್ ನಿಲ್ದಾಣದಲ್ಲಿ ದಿನ ನಿತ್ಯ ಸಾವಿರಾರು ಪ್ರಯಾಣಿಕರು ಹಾಗೂ ಸಾರ್ವಜನಿಕರು ಬರುವದರಿಂದ ಮೊದಲು ಕೆಲವೊಂದು ಕಡೆ ಸ್ವಚ್ಛತೆಯಿಲ್ಲದ್ದು,ಕಂಡು ಸಾರಿಗೆ ಸಿಬ್ಬಂದಿ ಸ್ವಚ್ಛಗೊಳ್ಳಿಸಿ ಜನರಿಗೆ ಕುಳಿತುಕೊಳ್ಳಲು ಅನುಕೂಲ ಮಾಡಿಕೊಟ್ಟರು...
Kshetra Samachara
20/01/2022 08:44 pm