ನವಲಗುಂದ : ತಾಲೂಕಿನಾದ್ಯಂತ ಈಗ ಲೋಕೋಪಯೋಗಿ ಇಲಾಖೆಯಿಂದ ಹದಗೆಟ್ಟ ರಸ್ತೆಗಳಿಗೆ ಪ್ಯಾಚ್ ವರ್ಕ್ ಕಾರ್ಯವೇನೋ ಅಗದಿ ಅಚ್ಚುಕಟ್ಟಾಗಿ ನಡಿತಾ ಇದೆ. ಆದರೆ ನೀರಾವರಿ ಕಾಲೋನಿ ಬಳಿ ಇರುವ ರಸ್ತೆಯನ್ನು ಮಾತ್ರ ಸಂಬಂಧ ಪಟ್ಟ ಅಧಿಕಾರಿಗಳು ಯಾಕೆ ಮರೆತಿದ್ದಾರೆ ಎನ್ನೋದೇ ತಿಳಿಯದಂತಾಗಿದೆ ಅನ್ನೋದು ಸಾರ್ವಜನಿಕರ ಅಭಿಪ್ರಾಯ...
ಎಸ್..! ಇದು ನವಲಗುಂದ ಪಟ್ಟಣದಲ್ಲಿರುವ ನೀರಾವರಿ ಕಾಲೋನಿ ಬಳಿಯ ರಸ್ತೆ, ಇಲ್ಲಿ ಹೆಚ್ಚಾಗಿ ಸಂಚರಿಸೋದು ಕಾಲೇಜು ವಿದ್ಯಾರ್ಥಿಗಳು ಹಾಗೂ ನೀರಾವರಿ ಇಲಾಖೆ ಸಿಬ್ಬಂದಿ ವರ್ಗ, ಇಂತಹ ರಸ್ತೆ ಮಾತ್ರ ಅಧಿಕಾರಿಗಳ ಗಮನಕ್ಕೆ ಬಂದೇ ಇಲ್ವೇನೋ ಅನಿಸುತ್ತಿದೆ ಅಂತಾ ನಾವು ಹೇಳ್ತಾ ಇಲ್ರಿ ಸಾರ್ವಜನಿಕರೇ ಮಾತಾಡಿಕೊಳ್ತಾ ಇದ್ದಾರೆ. ಮಳೆಗಾಲದಲ್ಲಿ ಇಲ್ಲಿ ಸಂಚಾರಿಸೋದು ದೂರದ ಮಾತು, ಇತ್ತ ನೋಡಲು ಸಹ ಆಗದ ಪರಿಸ್ಥಿತಿ ಬಂದಿರುತ್ತೆ. ಇಂತಹ ದುಸ್ಥಿತಿಯಲ್ಲೇ ವಿದ್ಯಾರ್ಥಿಗಳು ಮತ್ತು ನೀರಾವರಿ ಇಲಾಖೆ ಸಿಬ್ಬಂದಿ ಸಂಚರಿಸುವ ಅನಿವಾರ್ಯತೆ ಬಂದೋದಾಗಿದೆ. ಇದಕ್ಕೆ ಸಂಬಂಧ ಪಟ್ಟ ಮೇಲಾಧಿಕಾರಿಗಳು ಎಚ್ಚೆತ್ತು ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕಿದೆ.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
20/01/2022 02:57 pm