ಹುಬ್ಬಳ್ಳಿ: ಸರ್ಕಾರಿ ಯೋಜನೆಯನ್ನು ಪಡೆದುಕೊಳ್ಳಲು ಅದೆಷ್ಟೋ ಜನರು ಸೂಕ್ತ ದಾಖಲೆಗಳ ಕೊರತೆಯಿಂದ ಯೋಜನೆ ಲಾಭ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಫುಲ್ ಸ್ಟಾಪ್ ಹಾಕಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಹಯೋಗದೊಂದಿಗೆ ಪಾಲಿಕೆ ಚುನಾಯಿತ ಸದಸ್ಯರಾದ ಇಮ್ರಾನ್ ಯಲಿಗಾರ ಅವರು ನಿರ್ದೇಶನದಲ್ಲಿ ಕಾಮನ್ ಸರ್ವೀಸ್ ಸೆಂಟರ್ ಲೋಕಾರ್ಪಣೆ ಮಾಡಲಾಯಿತು.
ಹೌದು.. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಾರ್ಡ್ ನಂಬರ 33ರಲ್ಲಿ ಬರುವ ಘೋಡಕೆ ಪ್ಲಾಟ್, ಆನಂದನಗರ ಸೇರಿದಂತೆ ಮೂರು ಕಡೆಗಳಲ್ಲಿ ಕಾಮನ್ ಸರ್ವಿಸ್ ಸೆಂಟರ್ ಗೆ ಚಾಲನೆ ನೀಡಲಾಯಿತು. ಪತ್ರಕರ್ತರಾದ ಗುರುರಾಜ ಹೂಗಾರ, ಪಾಲಿಕೆ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರಾದ ಇಮ್ರಾನ್ ಯಲಿಗಾರ ಅವರು ಚಾಲನೆ ನೀಡಿದರು.
ಜನರಿಗೆ ಆಧಾರ ಕಾರ್ಡ್, ರೇಷನ್ ಕಾರ್ಡ್, ವೋಟಿನ್ ಕಾರ್ಡಿನಂತಹ ಸೇವೆಯ ಜೊತೆಗೆ ವೃದ್ಧಾಪ್ಯ ವೇತನ, ಅಂಗವಿಕಲರಿಗೆ ಮಾಸಿಕ ವೇತನದ ಸೌಲಭ್ಯಗಳನ್ನು ಮಾತ್ರವಲ್ಲದೆ ಸರ್ಕಾರದ ಯೋಜನೆಗಳು ಜನರ ಮನೆಯ ಬಾಗಿಲಿಗೆ ತಲುಪುವ ಕಾರ್ಯವನ್ನು ಮಾಡುವ ಸದುದ್ದೇಶದಿಂದ ಧರ್ಮಸ್ಥಳ ಗ್ರಾಮಭಿವೃದ್ಧಿಯ ಟ್ರಸ್ಟ್ ಮುಂದಾಗಿದ್ದು, ಇದಕ್ಕೆ ಪೂರಕವಾಗಿ ಪಾಲಿಕೆ ಸದಸ್ಯರಾದ ಇಮ್ರಾನ್ ಯಲಿಗಾರ ಮುತುವರ್ಜಿಯಿಂದ ಕೆಲಸ ಮಾಡಿ ಜನರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ.
ಇನ್ನೂ ಹೆಚ್ಚಿನ ಸೇವೆಯನ್ನು ಮಾಡುವ ಮೂಲಕ ಜನರಿಗೆ ಸರ್ಕಾರದ ಪ್ರತಿಯೊಂದು ಯೋಜನೆಗಳು ಮನೆಯ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಮಾಡುವ ಭರವಸೆ ನೀಡಿದ್ದಾರೆ.
Kshetra Samachara
17/01/2022 02:40 pm