ಅಣ್ಣಿಗೇರಿ : ವಾರಂತ್ಯ ಕರ್ಫ್ಯೂ ಹಿನ್ನೆಲೆ ಪಟ್ಟಣದಲ್ಲಿ ಎಂದಿನಂತೆ ಸಾರಿಗೆ ಸಂಚಾರ ಇದ್ದರು ಸಹ ಅಣ್ಣಿಗೇರಿ ಬಸ್ ನಿಲ್ದಾಣ ಹಾಗೂ ಬಸ್ಸುಗಳಲ್ಲಿ ಪ್ರಯಾಣಿಕರಿಲ್ಲದೆ ಬಸ್ ಗಳು ಖಾಲಿ ಖಾಲಿ ಸಂಚಾರ ನಡೆಸಿದ್ದು, ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ.
ಅಗತ್ಯ ಕೆಲಸ ಕಾರ್ಯಗಳಿಗೆ ಹೋಗುವ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ರಾಜ್ಯ ಸರಕಾರ ನಿಯಮಿತ ಬಸ್ಸುಗಳ ಸೌಲಭ್ಯ ಒದಗಿಸಿತ್ತು. ಆದರೆ ಪ್ರಯಾಣಿಕರು ಇಲ್ಲದೆ ಬಸ್ ಗಳು ಖಾಲಿ ಖಾಲಿ ಸಂಚರಿಸುತ್ತಿವೆ.
Kshetra Samachara
15/01/2022 07:09 pm