ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಗ್ರಾಮದ ರಸ್ತೆ ಅಭಿವೃದ್ಧಿಗೆ ಸಚಿವರಿಗೆ ಮನವಿ ಕೊಟ್ಟ ಹಳ್ಳಿಗರು

ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದ ರೈತರ ಜಮೀನುಗಳಿಗೆ ಹೋಗಲು ರಸ್ತೆ ಇಲ್ಲದಂತಾಗಿದ್ದು, ಗುಡೇನಕಟ್ಟಿಯಿಂದ ಅಲ್ಲಾಪುರ ಕಡಪಟ್ಟಿ ಜನರು ದಿನನಿತ್ಯ ಗ್ರಾಮ ಪಂಚಾಯಿತಿ ಕಚೇರಿಗೆ ಬರಲು ದಾರಿ ಇರುವುದಿಲ್ಲ ಈ ಸಮಸ್ಯೆ ಆಲಿಸಿ ರಸ್ತೆ ಮಂಜೂರು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ ಅವರಿಗೆ ಹುಬ್ಬಳ್ಳಿಯ ಅವರ ನಿವಾಸದಲ್ಲಿ ಎರಡು ಹಳ್ಳಿ ಗ್ರಾಪಂ ಸದಸ್ಯರು ಮನವಿ ಸಲ್ಲಿಸಿದರು. ಕ

ಡಪಟ್ಟಿಯಿಂದ ಹಳ್ಯಾಳ ಮತ್ತು ಕಡಪಟ್ಟಿ ಅಲ್ಲಾಪುರಕ್ಕೆ ಹೋಗುವ ರಸ್ತೆ ಸರಿಯಾಗಿ ಇರುವುದಿಲ್ಲ, ಮಳೆಗಾಲದಲ್ಲಿ ರೈತರು ಕೃಷಿ ಚಟುವಟಿಕೆ ಹೋಗಲು ಸಾಧ್ಯವಾಗುತ್ತಿಲ್ಲ, ಕೂಡಲೇ ತಾವುಗಳು ಈ ರಸ್ತೆಯನ್ನು ಡಾಂಬರೀಕರಣ ಮಾಡಿಕೊಡಬೇಕೆಂದು ಮನವಿಯಲ್ಲಿ ವಿವರಿಸಿದ್ದಾರೆ.

ಈ ಸಂದರ್ಭದಲ್ಲಿ ಪಕೀರಪ್ಪ ಮೂಲಿಮನಿ, ಬಸವರಾಜ ಗಂಗಾಯಿ, ಬಸುರಾಜ ತಡಸದ, ರಾಜು ಮಲ್ಲಿಗವಾಡ, ಮಲ್ಲಿಕಾರ್ಜುನ ಮೂಲಿಮನಿ, ಬಸವರಾಜ ಯೋಗಪ್ಪನವರ, ಯಲ್ಲಪ್ಪ ಕಟ್ಟಿಕಾರ, ಚನ್ನಬಸಪ್ಪ ಸಿದ್ದನ್ನವರ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

13/01/2022 09:47 pm

Cinque Terre

10.57 K

Cinque Terre

1

ಸಂಬಂಧಿತ ಸುದ್ದಿ