ಹುಬ್ಬಳ್ಳಿ: ಅದು ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಮಾತ್ರವಲ್ಲ. ಎರಡನೇ ರಾಜಧಾನಿ ಅಂತ ಕರೆಸಿಕೊಳ್ಳುವ ನಗರ. ಈ ನಗರದ ಪರಿಚಯವಿಲ್ಲ ಎನ್ನುವವರೇ ಇಲ್ಲ. ಸಾಕಷ್ಟು ಹೆಸರು ಮಾಡಿರುವ ಈ ನಗರದ ಅವ್ಯವಸ್ಥೆ ನೋಡಿದರೇ ನಿಜಕ್ಕೂ ಇಷ್ಟು ವರ್ಷ ಜನಪ್ರತಿನಿಧಿಗಳು ಹಾಗೂ ಸರ್ಕಾರ ಏನು ಮಾಡಿದೆ. ಅದೆಷ್ಟೋ ಯೋಜನೆ ಜಾರಿಗೆ ಬಂದರೂ ಈ ಸಮಸ್ಯೆಗೆ ಮಾತ್ರ ಮುಕ್ತಿ ಸಿಗುತ್ತಿಲ್ಲ. ಹಾಗಿದ್ದರೇ ಯಾವುದು ಆ ನಗರ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್...
ಗಂಡು ಮಟ್ಟಿನ ನಾಡು ಎಂದು ಖ್ಯಾತಿ ಪಡೆದ ಹುಬ್ಬಳ್ಳಿ ಇನ್ನೂ ಎಷ್ಟು ವರ್ಷ ಕಳೆದರೂ ಅಭಿವೃದ್ಧಿ ಆಗುವುದೇ ಇಲ್ಲ. ಅದೆಷ್ಟೋ ಸ್ಮಾರ್ಟ್ ಸಿಟಿ ಯೋಜನೆ ಬಂದರೂ ನಮ್ಮ ಜನ ಸಮಸ್ಯೆಯಲ್ಲಿ ಮಗ್ಗಲು ಬದಲಿಸಿ ಮಲಗುವಂತ ಸ್ಥಿತಿ ಮಾತ್ರ ತಪ್ಪುವುದೇ ಇಲ್ಲ. ಹೌದು.. ಹುಬ್ಬಳ್ಳಿಗೆ ಸ್ಮಾರ್ಟ್ ಸಿಟಿ ಯೋಜನೆ ಬಂದಿರುವುದು ಜನರ ಸಮಸ್ಯೆ ಬಗೆಹರಿಸಲು. ಆದರೆ ಇಲ್ಲಿ ಅಲ್ಪ ಸ್ವಲ್ಪ ಸಮಸ್ಯೆಯಲ್ಲಿಯೇ ಸ್ಮಾರ್ಟ್ ಮಾಡಲು ಹೊರಟಿದ್ದಾರೆ. ಆದರೆ ಹುಬ್ಬಳ್ಳಿ ಮ್ಯಾದರ ಓಣಿ ಅಂತಹ ಬಹುತೇಕ ನಗರದಲ್ಲಿ ನಿಜಕ್ಕೂ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಎಲ್ಲೆಂದರಲ್ಲಿ ತ್ಯಾಜ್ಯ ನೀರು, ಡ್ರೈನೇಜ್ ನೀರಿನ ದುರ್ನಾತ, ಅವ್ಯವಸ್ಥಿತ ಚರಂಡಿ, ರಸ್ತೆಗಳ ಸಮಸ್ಯೆ ಹಾಗೂ ಹತ್ತು ಹಲವು ಮೂಲಭೂತ ಸಮಸ್ಯೆಗಳನ್ನು ಹೊತ್ತು ಇಲ್ಲಿನ ಜನರು ಜೀವನ ನಡೆಸುತ್ತಿದ್ದಾರೆ. ಇದು ಚುನಾವಣೆಗೆ ನೆನಪಾಗುವ ವಾರ್ಡಿನಂತೆ ಗೋಚರಿಸುತ್ತಿದೆ. ಇಲ್ಲಿ ಅಭಿವೃದ್ಧಿ ಕಾರ್ಯಗಳೇ ಶೂನ್ಯವಾಗಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂಬರ 65ರಲ್ಲಿ ಬರುವ ಮ್ಯಾದರ ಓಣಿಯಲ್ಲಿ ಸಮಸ್ಯೆಗಳ ಸರಮಾಲೆಯ ಜನರ ಮುಂದಿದೆ. ಅದೆಷ್ಟೋ ಯೋಜನೆ ಬಂದರೂ ಉಪಯೋಗವಾಗಿಲ್ಲ. ಸ್ಮಾರ್ಟ್ ಸಿಟಿ ಯೋಜನೆ ಬಂದರೂ ಸ್ಮಾರ್ಟ್ ಆಗುವುದಿರಲಿ. ಸ್ವಲ್ಪ ಸ್ಮಾರ್ಟ್ ಟಚ್ ಕೂಡ ಆಗಿಲ್ಲ. ಇಂತಹ ಅಧುನಿಕ ಯುಗದಲ್ಲಿ ಕೂಡ ಜನರು ಸಮಸ್ಯೆ ಸುಳಿಯಲ್ಲಿಯೇ ಜೀವನ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ನೂರಾರು ಕೋಟಿ ಅನುದಾನ ಬಂದರೂ ಈ ವಾರ್ಡಿನಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಗೆ ಮಾತ್ರ ಒತ್ತು ನೀಡಿಲ್ಲ. ಅಲ್ಲದೇ ಇಲ್ಲಿನ ಜನರು ಸಮಸ್ಯೆಗಳಿಗೆ ಅನಿವಾರ್ಯವಾಗಿ ಹೊಂದಿಕೊಂಡು ಜೀವನ ನಡೆಸುತ್ತಿದ್ದಾರೆ.
Kshetra Samachara
13/01/2022 04:32 pm