ಹುಬ್ಬಳ್ಳಿ: ಅದು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿರುವ ಪ್ರತಿಷ್ಟಿತ ನಗರ. ಈ ನಗರಕ್ಕೆ ಅಯೋಧ್ಯೆಯ ರಾಮನ ಹೆಸರನ್ನು ನಾಮಕರಣ ಮಾಡಲಾಗಿದೆ. ಆದರೆ ಇಲ್ಲಿರುವ ಅವ್ಯವಸ್ಥೆ ನೋಡಿದರೇ ಇದೂ ನಿಜಕ್ಕೂ ರಾಮನಗರವೇ ಎಂಬುವಂತ ಅನುಮಾನ ಕಾಡುವುದಂತೂ ಖಂಡಿತ.
ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ರಾಮನಗರದಲ್ಲಿ ಫುಟ್ ಪಾತ್ ಗಳನ್ನು ಜನರು ಅಕ್ರಮಣ ಮಾಡಿಕೊಂಡಿದ್ದಾರೆ. ಎಲ್ಲೆಂದರಲ್ಲಿ ತ್ಯಾಜ್ಯ ಸಾಮಗ್ರಿಗಳನ್ನು ಇಟ್ಟಿರುವುದು ಹಾಗೂ ವಾಹನಗಳನ್ನು ಪಾರ್ಕ್ ಮಾಡಿರುವುದರಿಂದ ಇಲ್ಲಿ ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಬೇಕಾಬಿಟ್ಟಿಯಾಗಿ ಎಸೆದಿರುವ ಸಾಮಗ್ರಿಗಳಿಂದ ಹಾಗೂ ಫುಟ್ ಪಾತ್ ಅತಿಕ್ರಮಣ ಮಾಡಿರುವುದರಿಂದ ರಾಮನಗರದ ಸೌಂದರ್ಯಕ್ಕೆ ಕಪ್ಪು ಚುಕ್ಕೆ ಇಟ್ಟಂತಾಗಿದೆ.
ಹುಬ್ಬಳ್ಳಿ ಧಾರವಾಡ ಜನರ ಸಮಸ್ಯೆ ಏನು ಅಂತ ಅರ್ಥ ಆಗ್ತಿಲ್ಲ. ರಸ್ತೆ ಸರಿಯಿಲ್ಲ ರಸ್ತೆ ಮಾಡ್ರಿ ಮೂಲಭೂತ ಸೌಕರ್ಯ ಬೇಕು ಅಂತ ಹೇಳ್ತಾರೆ. ಆದರೆ ರಸ್ತೆಯನ್ನು ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡದೇ ಬೇಕಾಬಿಟ್ಟಿಯಾಗಿ ಅವ್ಯವಸ್ಥೆಗೆ ದೂಡುತ್ತಿದ್ದಾರೆ. ಹುಬ್ಬಳ್ಳಿ ರೈಲ್ವೆ ಆಸ್ಪತ್ರೆ ಹತ್ತಿರ ಇರುವ ವಿಜಯಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯು ಸಾರ್ವಜನಿಕರಿಂದಲೇ ಅತಿಕ್ರಮಣಗೊಂಡಿದ್ದು, ಸುರಕ್ಷಿತ ಹಾಗೂ ಸರಳ ಸಂಚಾರಕ್ಕೆ ಸಂಚಕಾರ ತಂದೊಡ್ಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕಿದ್ದ ಪಾಲಿಕೆ ಅಧಿಕಾರಿಗಳು ಕಣ್ಣು ಕಾಣದಂತೇ ನೋಡಿದರೂ ನೋಡದಂತೆ ವರ್ತಿಸುತ್ತಿದ್ದಾರೆ.
ಒಟ್ಟಿನಲ್ಲಿ ವಾಹನ ಸಂಚಾರಕ್ಕೆ ಹಾಗೂ ಫುಟ್ ಪಾತ್ ಅತಿಕ್ರಮಣಕ್ಕೆ ಬ್ರೇಕ್ ಹಾಕಬೇಕಿದ್ದ ಪಾಲಿಕೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಮೌನ ವಹಿಸಿರುವುದು ನಿಜಕ್ಕೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಎಚ್ಚೇತ್ತುಕೊಂಡು ಸೂಕ್ತ ಕ್ರಮಗಳನ್ನು ಜರುಗಿಸಿ ಅತಿಕ್ರಮಣಕ್ಕೆ ಬ್ರೇಕ್ ಹಾಕುವ ಕಾರ್ಯವನ್ನು ಮಾಡಬೇಕಿದೆ.
Kshetra Samachara
12/01/2022 08:12 pm