ನವಲಗುಂದ : ಸೋಮವಾರ ಬೆಳಿಗ್ಗೆ ಸೊಟಕನಾಳ ಗ್ರಾಮಸ್ಥರು ರುದ್ರಭೂಮಿಗೆ ತೆರಳಲು ರಸ್ತೆ ಇಲ್ಲದ ಹಿನ್ನೆಲೆ ಪಟ್ಟಣದ ತಾಲೂಕಾ ಕಚೇರಿ ಎದುರು ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ ಪರಿಣಾಮ ಗ್ರಾಮಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಹೌದು ಪ್ರಭಾರಿ ತಹಶೀಲ್ದಾರ್ ಪ್ರವೀಣ ಹುಚ್ಚಣ್ಣವರ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಇನ್ನು ತಾಲೂಕಿ ಗುಡಿಸಾಗರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೊಟಕನಾಳ ಗ್ರಾಮಸ್ಥರು ಸೋಮವಾರ ಬೆಳಿಗ್ಗೆ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮಾಡಿ ರಸ್ತೆಗಾಗಿ ಆಗ್ರಹಿಸಿ, ಪಟ್ಟು ಬಿಡದೆ ಕುಳಿತು, ಆಕ್ರೋಶ ಹೊರ ಹಾಕಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳು ಸ್ಪಂದಿಸಿದ್ದಾರೆ.
Kshetra Samachara
11/01/2022 09:47 am