ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಂಚಾಯ್ತಿ ಎದುರು ಗ್ರಾಮಸ್ಥರ ಮೂಲ ಸೌಕರ್ಯದ ಕೂಗು

ಹುಬ್ಬಳ್ಳಿ: ಇಲ್ಲೋಂದು ಊರಲ್ಲಿ ತಮ್ಮ ವಾರ್ಡಿಗೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಕೋರಿ ಗ್ರಾಮಸ್ಥರು ಪಂಚಾಯಿತಿ ಎದುರು ಧರಣಿ ನಡೆಸಿ, ಅಗತ್ಯ ಸೌಲಭ್ಯ ನೀಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ರಾಮನಗೌಡ ಪ್ಲಾಟ್ ನಿವಾಸಿಗಳು ಕಳೆದ 25-30 ವರ್ಷಗಳಿಂದ ಅಲ್ಲಿಯೇ ವಾಸ ಮಾಡುತ್ತಿದ್ದರೂ ಇಲ್ಲಿನ ಜನರಿಗೆ ರಸ್ತೆ, ಚರಂಡಿ, ಮುಖ್ಯವಾಗಿ ಕುಡಿಯುವ ನೀರಿನ ವ್ಯವಸ್ಥೆ ಸಹ ಇಲ್ಲವಾಗಿದೆ.

ಸದ್ಯ ಅಲ್ಲಿನ ನಿವಾಸಿಗಳು ಈ ಸಮಸ್ಯೆ ಬಗೆಹರಿಸುವಂತೆ ಕಳೆದ ನವಂಬರ್ 20 ರಂದು ಅಧಿಕಾರಿಗಳಿಗೆ ಮನವಿ ಮಾಡಿದ್ರೇ, ಅಧಿಕಾರಿಗಳು ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ನೆಪ ಹೇಳಿ ನುಣುಚಿಕೊಂಡು, ಮರಳಿ ರಾಮನಗೌಡ ಪ್ಲಾಟ್ ಅಭಿವೃದ್ಧಿ ಬಗ್ಗೆ ಗಮನಿಸಿಲ್ಲ, ಈ ಬಗ್ಗೆ ಗ್ರಾಮಸ್ಥರು ಇಂದು ಧರಣಿ ಕೈಗೊಂಡಿದ್ದಾರೆ.

ಸದ್ಯ ಸಂಬಂಧಪಟ್ಟ ಮೇಲಾಧಿಕಾರಿಗಳು ಹಾಗೂ ಹುಬ್ಬಳ್ಳಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಗಮನಿಸಿ ಗ್ರಾಮಸ್ಥರ ಹೋರಾಟಕ್ಕೆ ಉತ್ತರ ನೀಡಬೇಕಿದೆ.

-ಇದು ವೀಕ್ಷಕರ ವರದಿ

Edited By : Manjunath H D
Kshetra Samachara

Kshetra Samachara

10/01/2022 03:36 pm

Cinque Terre

15.7 K

Cinque Terre

0

ಸಂಬಂಧಿತ ಸುದ್ದಿ