ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಚರಂಡಿಯಲ್ಲಿ ಕೊಳಚೆ ಶೇಖರಣೆ; ಸ್ಥಳೀಯರ ಪರದಾಟ

ನವಲಗುಂದ : ದಿನನಿತ್ಯ ವೃದ್ಧರು, ಮಕ್ಕಳು ಸೇರಿದಂತೆ ನೂರಾರು ಜನರ ಸಂಚಾರ, ಜನ ದಟ್ಟನೆಯಿಂದ ಕೂಡಿರುವಂತಹ ಪ್ರಮುಖ ಸ್ಥಳದಲ್ಲಿ ಕೊಳಚೆಯ ಸಾಮ್ರಾಜ್ಯ ತಾಂಡವ ಆಡುತ್ತಿದೆ. ಇದರಿಂದ ಸ್ಥಳೀಯರು ಬೇಸತ್ತು ಹೋಗಿದ್ದಾರೆ.

ಎಸ್ ಇದು ನವಲಗುಂದ ಪಟ್ಟಣದ ಬ್ಯಾಂಕ್ ಆಫ್ ಬರೋಡ ಎದುರಿನ ಚರಂಡಿ, ಈ ಚರಂಡಿಯಲ್ಲಿ ನೀರು ನಿಂತು 15 ದಿನಗಳಿಗಿಂತ ಹೆಚ್ಚು ಕಾಲ ಕಳೆದಿವೆ. ಆದರೂ ಸ್ವಚ್ಛತೆಗೆ ಯಾರೂ ಮುಂದಾಗಿಲ್ಲ. ಇನ್ನು ಈ ವರದಿ ಬಿತ್ತರಿಸಲು ಪ್ರಮುಖ ಕಾರಣ ಅಂದ್ರೆ ಅದು ಬ್ಯಾಂಕ್ ಹಿಂದೆ ಇರುವ ಹುರಕಡ್ಲಿ ಕಲ್ಯಾಣ ಮಂಟಪದ ಮುಸುರೆ ನೀರು ನೇರವಾಗಿ ಈ ಗಟಾರಿಗೆ ಬಂದು ಬಿಳ್ಳುತ್ತೆ, ಕೇವಲ ಮುಸುರೆ ಅಷ್ಟೇ ಅಲ್ಲ ಪ್ಲಾಸ್ಟಿಕ್ ಗ್ರಾಸ್, ಪ್ಲೇಟ್ ಎಲ್ಲವು ಇಲ್ಲೇ ಶೇಖರವಾಗುತ್ತೆ.

ಇಂತಹ ದುಸ್ಥಿತಿಯಲ್ಲಿ ಬ್ಯಾಂಕ್ ಗೆ ಬಂದ ಸಾರ್ವಜನಿಕರ ಮತ್ತು ಪಕ್ಕದಲ್ಲೇ ಇರುವ ಗ್ಯಾರೇಜ್ ಗೆ ಬರುವ ಜನರ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೆ ಸ್ವಚ್ಛತೆ ಆಗಿಲ್ಲ ಅನ್ನೋದು ಸ್ಥಳೀಯರ ಆರೋಪ. ಕೂಡಲೇ ಈ ಚರಂಡಿಯ ಸ್ವಚ್ಛತೆಗೆ ಮುಂದಾಗ ಬೇಕು ಅನ್ನೋದು ಕೂಡ ಸ್ಥಳೀಯರ ಆಗ್ರಹವಾಗಿದೆ.

Edited By : Shivu K
Kshetra Samachara

Kshetra Samachara

15/12/2021 12:44 pm

Cinque Terre

26.08 K

Cinque Terre

0

ಸಂಬಂಧಿತ ಸುದ್ದಿ