ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕಾಲುವೆಯ ನೀರು ರಸ್ತೆ ಮೇಲೆ, ವಾಹನ ಸವಾರರ ಪರದಾಟ

ನವಲಗುಂದ : ಇದು ಅಳಗವಾಡಿ ಗ್ರಾಮದ ಕಾಲುವೆಯ ದುಸ್ಥಿತಿ, ದೃಶ್ಯಗಳಲ್ಲಿ ನೀವು ನೋಡುತ್ತಿರುವ ಹಾಗೆ, ಈ ಚಿಕ್ಕ ಕಾಲುವೆಯ ನೀರು ಹರಿದು ಹೋಗಲು ಸ್ಥಳವಿಲ್ಲದೆ ಸಂಪೂರ್ಣ ರಸ್ತೆಗೆ ಬರುತ್ತಿದೆ.

ನವಲಗುಂದ ತಾಲ್ಲೂಕಿನ ಅಳಗವಾಡಿ ಗ್ರಾಮದ ಈ ಕಾಲುವೆಯ ಬಳಿ ಮದ್ಯ ಸೇವಿಸಿ ತ್ಯಾಜ್ಯವನ್ನು ಕಾಲುವೆಯಲ್ಲೇ ಎಸಿತ್ತಾರಂತೆ. ಅದೇ ತ್ಯಾಜ್ಯ ಕಾಲುವೆಯಲ್ಲಿ ಸಿಲುಕಿ ನೀರು ಹರಿದು ಹೋಗಲು ಸ್ಥಳವಿಲ್ಲದೆ ನೀರು ಹೊರ ಬರ್ತಿದೆ. ಇದರಿಂದ ದೃಶ್ಯವನ್ನು ಸೆರೆ ಹಿಡಿಯುವಾಗಲೇ ಬೈಕ್ ಸವಾರನೊಬ್ಬ ಬಿದ್ದಿದ್ದಾನೆ.

ಇನ್ನು ಇದೆ ನೀರನ್ನು ಗ್ರಾಮಸ್ಥರು ಕುಡಿಯಲು ಸಹ ಬಳಸ್ತಾರಂತೆ. ಇಂತಹ ನೀರು ಕುಡಿದ ಗ್ರಾಮಸ್ಥರ ಗತಿ ಏನು ಎಂಬುದು ಪ್ರಶ್ನೆಯಾಗಿದೆ. ಇಷ್ಟಕ್ಕೆಲ್ಲಾ ಕಾರಣ ನಿರ್ವಹಣೆ ಕೊರತೆ ಅಂತಾರೆ ಇಲ್ಲಿನ ಗ್ರಾಮಸ್ಥರು. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತು ಕಾಲುವೆಯ ಸ್ವಚ್ಛತೆ, ಮತ್ತು ರಸ್ತೆಯ ಸುಧಾರಣೆ ಜೊತೆಗೆ ನಿರ್ವಹಣೆಗೆ ಮುಂದಾಗಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

Edited By : Shivu K
Kshetra Samachara

Kshetra Samachara

13/12/2021 02:00 pm

Cinque Terre

43.97 K

Cinque Terre

0

ಸಂಬಂಧಿತ ಸುದ್ದಿ