ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸಿ ಸಿ ಕ್ಯಾಮರಾಗಳು ಕಡಿಮೆ : ಇದೇ ಕಳ್ಳಕಾಕರಿಗೆ ಹೆಚ್ಚಿನ ದುಡಿಮೆ

ಕುಂದಗೋಳ : ಸಂತೆಯಲ್ಲಿ ಮೊಬೈಲ್ ಕಳ್ಳತನ, ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ, ಅಂಗಡಿ ಮುಂಗಟ್ಟುಗಳ ಗಲ್ಲಾ ಪೆಟ್ಟಿಗೆ ಹಾಡು ಹಗಲೇ ಕಳ್ಳತನ, ಅಷ್ಟೇ ಯಾಕೆ ಸ್ವಾಮಿ ಜಾನುವಾರುಗಳ ಕಳ್ಳತನದ ಪ್ರಕರಣಗಳು ಹೆಚ್ಚಾಗಿ ಕಳ್ಳಕಾಕರಿಗೆ ಭಯ ಇಲ್ಲದ ಪರಿಸ್ಥಿತಿ ಕುಂದಗೋಳದಲ್ಲಿ ನಿರ್ಮಾಣವಾಗಿದೆ.

ವಾಣಿಜ್ಯನಗರಿಯ ಸೆರಗಿಗೆ ಹೊಂದಿಕೊಂಡು ನಿತ್ಯ ಆರ್ಥಿಕ ಮತ್ತು ಸಾಮಾಜಿಕವಾಗಿ ಬೆಳೆಯುತ್ತಿರುವ ಕುಂದಗೋಳ ಪುಡಿಗಳ್ಳರಿಗೆ ಫೇವರೀಟ್ ಸ್ಥಳವಾಗಿ ಎಷ್ಟೋ ಕಳ್ಳತನದ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರಿವೆ. ಪರಿಸ್ಥಿತಿ ಹೀಗಿದ್ದರೂ ಕುಂದಗೋಳ ಪಟ್ಟಣದಲ್ಲಿ ಕೇವಲ ಮೂರು ಎರಡು ಸಿಸಿ ಕ್ಯಾಮರಾ ಕಣ್ಗಾವಲಿದ್ದು ಕಳ್ಳರಿಗೆ ಬಂಡವಾಳವಾಗಿವೆ.

ಕುಂದಗೋಳದ ಮಾರ್ಕೇಟ್ ರಸ್ತೆ, ಗಾಂಧಿ ಸರ್ಕಲ್ ಹಾಗೂ ತಹಶೀಲ್ದಾರ ಕಚೇರಿ ಬಳಿ ಸಿಸಿ ಕ್ಯಾಮರಾ ಕಣ್ಗಾವಲು ಬಿಟ್ರೇ. ಕುಂದಗೋಳದಲ್ಲಿ ಬೇರೆಡೆ ಸಿಸಿ ಕ್ಯಾಮರಾ ಅಳವಡಿಸಿಲ್ಲ ಮುಖ್ಯವಾಗಿ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಪರ್ಕದಲ್ಲಿರುವ ಪಟ್ಟಣಕ್ಕೆ ಮುಂಜಾಗ್ರತೆ ಕ್ರಮ ಕಡಿಮೆಯಾಗಿ ಜನ ಹೆಚ್ಚು ಸಿಸಿ ಕ್ಯಾಮರಾ ಅಳವಡಿಸಲು ಒತ್ತಾಯಿಸಿದ್ದಾರೆ.

ಈಗಾಗಲೇ ನಡೆದ ಕಳ್ಳತನದ ಪ್ರಕರಣಗಳ ಬಗ್ಗೆ ಕಳ್ಳರ ಯಾವ ಸುಳಿವೂ ಸಹ ಲಭ್ಯವಾಗಿಲ್ಲ, ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಹಾಗೂ ಸ್ಥಳೀಯ ಪೊಲೀಸ್ ಠಾಣೆ ಮೇಲೆ ಜವಾಬ್ದಾರಿ ಹೆಚ್ಚಿದೆ.

ಈ ಹಿಂದೆ ನಡೆದ ಕಳ್ಳತನದ ಪ್ರಕರಣಗಳ ಬಗ್ಗೆ ಪೊಲೀಸರೇ ಖಾಸಗಿ ಮನೆ ಹೊಟೇಲ್ ಬ್ಯಾಂಕ್'ಗಳ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಮನಿಸಿ ಕುಂದಗೋಳ ತಾಲೂಕಿಗೆ ಭದ್ರತೆ ದೃಷ್ಟಿಯಿಂದ ಹೆಚ್ಚಿನ ಸಿಸಿ ಕ್ಯಾಮರಾ ಅಳವಡಿಸಿ ಪೊಲೀಸ್ ಪೆಟ್ರೋಲಿಂಗ್ ಜಾಸ್ತಿ ಮಾಡಿರಿ ಎಂಬುದು ಪಬ್ಲಿಕ್ ನೆಕ್ಸ್ಟ್ ಕಳಕಳಿ‌.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Shivu K
Kshetra Samachara

Kshetra Samachara

03/12/2021 04:02 pm

Cinque Terre

78.06 K

Cinque Terre

0

ಸಂಬಂಧಿತ ಸುದ್ದಿ