ಧಾರವಾಡ: ಧಾರವಾಡ ನಗರದ ಒಳ ರಸ್ತೆಗಳು, ಮುಖ್ಯರಸ್ತೆಗಳು ಹಾಗೂ ಹಳ್ಳಿಗಳಿಗೆ ಹೋಗುವ ರಸ್ತೆಗಳು ಹದಗೆಟ್ಟು ಸಾಕಷ್ಟು ತೊಂದರೆಯನ್ನುಂಟು ಮಾಡುತ್ತಿವೆ. ಇಷ್ಟಾದರೂ ನಮ್ಮ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅಂತಹ ರಸ್ತೆಗಳನ್ನು ಸುಧಾರಿಸುವ ಗೋಜಿಗೆ ಹೋಗುತ್ತಿಲ್ಲ. ಹದಗೆಟ್ಟ ರಸ್ತೆಗಳನ್ನು ನೋಡಲಾಗದೇ ಹಾಗೂ ಅದರಿಂದ ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆಯನ್ನು ನೋಡಲಾಗದೇ ಬಸೀರ್ ಎಂಬುವವರು ತಮ್ಮ ಸ್ವಂತ ಖರ್ಚಿನಲ್ಲಿ ಗುಂಡಿ ಮುಚ್ಚಿಸುವ ಕೆಲಸ ಮಾಡಿದ್ದಾರೆ.
ಧಾರವಾಡದ ಕಮಲಾಪುರ ಬಳಿಯ ರಸ್ತೆಯಲ್ಲಿ ಗುಂಡಿಗಳು ಬಿದ್ದು, ಅನೇಕ ತಿಂಗಳುಗಳೇ ಕಳೆದಿದ್ದವು. ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಎರಡು ಬಾರಿ ವರದಿಯನ್ನೂ ಪ್ರಸಾರ ಮಾಡಿತ್ತು. ವರದಿ ನೋಡಿಯೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಾಢ ನಿದ್ರೆಗೆ ಜಾರಿದ್ದರು. ಆದರೆ, ಜನರ ಸಮಸ್ಯೆ ಅರಿತ ಬಸೀರ್ ಎಂಬುವವರು ತಮ್ಮ ಸ್ವಂತ ಖರ್ಚಿನಲ್ಲಿ ಆ ಗುಂಡಿಗಳಿಗೆ ಮಣ್ಣು ಹಾಕಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
Kshetra Samachara
02/12/2021 02:05 pm