ಕುಂದಗೋಳ: ಅಕಾಲಿಕ ಮಳೆ ಅತಿವೃಷ್ಟಿ ಪರಿಣಾಮ ಅನ್ನದಾತನ ಹೊಲ ಮನೆಗಳಷ್ಟೇ ಅಲ್ಲಾ. ಈ ಗ್ರಾಮೀಣ ಭಾಗದ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕೆಸರು ಗದ್ದೆಯಾಗಿ ಮಾರ್ಪಟ್ಟಿವೆ.
ಕಳೆದ ಹಲವಾರು ವರ್ಷಗಳಿಂದ ದುರಸ್ತಿ ಕಾಣದೆ ಉಳಿದಿದ್ದ ಶರೇವಾಡ ಗ್ರಾಮದ ಮೂಲಕ ಬೆಟದೂರು, ಇನಾಮಕೊಪ್ಪ, ಹಂಚಿನಾಳ, ಕುಬಿಹಾಳ, ಯರೇಬೂದಿಹಾಳ, ಇಂಗಳಗಿ ಸಂಪರ್ಕ ಕಲ್ಪಿಸುವ ರಸ್ತೆ ಅಕ್ಷರಶಃ ಕೆಸರು ಗದ್ದೆಯಾಗಿ ಮಾರ್ಪಟ್ಟು ಈ ರೀತಿ ರಸ್ತೆಯಲ್ಲಿ ನೀರು ಸಂಗ್ರಹವಾಗಿ ವಾಹನ ಸವಾರರ ಸಂಚಕಾರಕ್ಕೆ ಕಾದು ಕೂತಿದೆ.
ವಿಪರ್ಯಾಸವೆಂದರೆ ಈ ರಸ್ತೆ ಹಾಳಾದ ಬಗ್ಗೆ ಅದೆಷ್ಟೋ ಸಲ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ಬಂದರೂ ಇಂತಹ ಅತಿವೃಷ್ಟಿ ಸಮಸ್ಯೆ ಅರಿತರು ಹಿಡಿ ಮಣ್ಣು ಹಾಕದೆ ಕೈ ಬಿಟ್ಟಿರುವುದು ಜನಾಕ್ರೋಶಕ್ಕೆ ಗುರಿಯಾಗಿದೆ.
ಸಧ್ಯ ಈ ರಸ್ತೆಯಲ್ಲಿ ನಿತ್ಯ ಸಂಚಾರ ಮಾಡುವ ವಾಹನ ಸವಾರ ಮಹಾವೀರ ಎಂಬುವವರು ಪಬ್ಲಿಕ್ ನೆಕ್ಸ್ಟ್'ಗೆ ವಿಡಿಯೋ ಕಳುಹಿಸಿ ಈ ಸಮಸ್ಯೆಗೆ ಮುಕ್ತಿ ಯಾವಾಗ ಎನ್ನುತ್ತಿದ್ದಾರೆ ಮಾನ್ಯ ಜನಪ್ರತಿನಿಧಿಗಳೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ ಜಿಲ್ಲಾಧಿಕಾರಿಗಳೇ ಜನರ ಉತ್ತರ ಕೊಡಿ.
Kshetra Samachara
02/12/2021 12:19 pm