ಕುಂದಗೋಳ : ತಾಲೂಕಿನ ಬೆಳೆ ಹಾನಿಯಾದ ಪ್ರದೇಶಗಳಿಗೆ ಸ್ವತಃ ತಹಶೀಲ್ದಾರ ಭೇಟಿ ನೀಡಿ ಪರಿಶೀಲನೆ ಮಾಡಿ ಪರಿಹಾರ ಘೋಷಣೆ ಮಾಡಬೇಕು, ಈಗಾಗಲೇ ಬೆಳೆ ಹಾನಿ, ಬೆಳೆ ವಿಮೆ ಎಂದು ರೈತರಿಂದ ಅರ್ಜಿ ತೆಗೆದುಕೊಂಡ ಇಲಾಖೆ ಆದಷ್ಟೂ ಶೀಘ್ರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಉಮೇಶ್ ಹೆಬಸೂರ ಸರ್ಕಾರಕ್ಕೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿ ಒತ್ತಾಯ ಮಾಡಿದ್ದಾರೆ.
ಹೌದು ! ಕುಂದಗೋಳ ತಾಲೂಕಿನ ಹಳ್ಳಿಗರ ಜಮೀನಿಗೆ ಭೇಟಿ ಕೊಟ್ಟ ಅವರು ರಾಜ್ಯಾದ್ಯಂತ ಹಾನಿಯಾಗಿದೆ, ಆ ಹಾನಿ ನಡುವೆಯೂ ಸರ್ಕಾರ ದಾಖಲೆ ನೆಪದಲ್ಲಿ ರೈತರನ್ನು ಓಡಾಡಿಸಿದೆ, ಈಗಲೂ ಅದೆಷ್ಟೋ ರೈತರು ಬೆಳೆ ವಿಮೆ ತುಂಬಿಲ್ಲಾ ಕಾರಣ ಸರ್ಕಾರ ಹಾಗೂ ವಿಮಾ ಕಂಪನಿ ವಿಮೆ ಯೋಜನೆ ಮಾಹಿತಿ ಅವರಿಗೆ ತಲುಪಿಲ್ಲಾ ಇನ್ನೂ ತುಂಬಿದವರು ಬೆಳೆ ಪರಿಹಾರಕ್ಕೆ ವರ್ಷ ಗಟ್ಟಲೇ ಕಾಯಬೇಕು ಈ ಪರಿಸ್ಥಿತಿ ಬದಲು ಹಾನಿಯಾದ ಬೆಳೆ ಪರಿಶೀಲನೆ ನಡೆಸಿ ಈ ಡಿಸೇಂಬರ್ ಅಂತ್ಯದೊಳಗೆ ಪರಿಹಾರ ನೀಡಿ ಎಂದರು.
ಬೆಳೆ ವಿಮೆ ಅರ್ಜಿಗೆ ರೈತರಿಂದ ಈಗಾಗಲೇ ಬಾಂಡ್ ಪೇಪರ್ ಪಡೆಯಲಾಗಿದ್ದು ಇದು ರೈತರನ್ನು ಮತ್ತಷ್ಟೂ ಓಡಾಟಕ್ಕೆ ಇಡು ಮಾಡಿದೆ ಎಂದರು.
Kshetra Samachara
30/11/2021 08:30 pm