ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಸ್ ಇಲ್ಲದೇ ವಿದ್ಯಾರ್ಥಿಗಳ ಪರದಾಟ: ಅಧಿಕಾರಿಗಳಿಗೆ ಕೇಳುತ್ತಿಲ್ಲ ಸಂಕಷ್ಟದ ಮಾತು...!

ಹುಬ್ಬಳ್ಳಿ: ಇಷ್ಟುದಿನ ಕೊರೊನಾದಿಂದ ಶಾಲೆ ಕಾಲೇಜಿನ ಬಾಗಿಲು ಹಾಕಲಾಗಿತ್ತು. ಆದರೆ ಈಗ ಕೊರೊನಾ ಹಾವಳಿ ತಗ್ಗಿದ್ದು, ಶಾಲೆ, ಕಾಲೇಜು ಆರಂಭಗೊಂಡಿವೆ. ಆದರೂ ವಿದ್ಯಾರ್ಥಿಗಳು ಮಾತ್ರ ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಕಾರಣ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದಿರುವುದು.

ಬಸ್ ಗಾಗಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುವುದೇ ದಿನಚರಿಯ ಕಾರ್ಯವಾಗಿದೆ. ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮದಲ್ಲಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ರಸ್ತೆಯಲ್ಲಿ ಕುಳಿತು ಸಾರಿಗೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲವೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅಲ್ಲದೇ ಗುಡಿಹಾಳ, ಪರಸಾಪೂರ, ರೇವಡಿಹಾಳ ಗ್ರಾಮದ ವಿದ್ಯಾರ್ಥಿಗಳು ಕೂಡ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.

Edited By : Manjunath H D
Kshetra Samachara

Kshetra Samachara

26/11/2021 01:05 pm

Cinque Terre

13.81 K

Cinque Terre

2

ಸಂಬಂಧಿತ ಸುದ್ದಿ