ಕುಂದಗೋಳ : ಪಟ್ಟಣದ ತಹಶೀಲ್ದಾರ ಕಚೇರಿ, ಪಟ್ಟಣ ಪಂಚಾಯಿತಿ, ಅಷ್ಟೇ ಯಾಕೆ ತಾಲೂಕು ಪಂಚಾಯಿತಿ ಎದುರಿನ ಬೀದಿ ದೀಪಗಳು ಹಗಲಲ್ಲೇ ಜಗತ್ತನ್ನು ಬೆಳಗುತ್ತಿವೆ.
ಹೌದು ! ಲೈನ್ ಪಾರ್ಟ್ ಕಾರಣದಿಂದ ಇಂದು ಬೆಳಿಗ್ಗೆಯಿಂದಲೇ ಕುಂದಗೋಳ ಪಟ್ಟಣದ ಮೂರು ಸರ್ಕಾರಿ ಕಚೇರಿ ಎದುರಿನ ಬೀದಿ ದೀಪಗಳು ಹಗಲಲ್ಲೇ ಜಗತ್ತನ್ನು ಬೆಳಗುತ್ತಿವೆ, ಇದನ್ನು ಕಂಡ ಸ್ಥಳೀಯರು ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನು ಕೇಳಿದ್ರೆ ಲೈನ್ ಪಾರ್ಟ್ ಆಗಿದೆ ಕ್ಲೀಯರ್ ಮಾಡಲು ಸೂಚಿಸಿದ್ದೇವೆ ಎನ್ನುತ್ತಿದ್ದಾರೆ.
ಒಂದು ಲೈನ್ ಪಾರ್ಟ್ ಹೆಸರಿನಲ್ಲಿ ಬೆಳಿಗ್ಗೆಯಿಂದಲೇ ಸಮಯ 1 ಗಂಟೆ ಆದ್ರೂ ಬೀದಿ ದೀಪಗಳು ಉದಿಯುತ್ತಿದ್ದು, ಸ್ಥಳೀಯರು ಅಧಿಕಾರಿಗಳು ಸಿಬ್ಬಂದಿಗಳು ಅದ್ಯಾವ್ ರೀತಿಯಲ್ಲಿ ಕೆಲಸ ಮಾಡುತ್ತಿವೆ ಎಂದು ದೂರುತ್ತಿದ್ದು, ಈ ವೇಳೆ ಕಳೆದ ನಾಲ್ಕು ತಿಂಗಳುಗಳಿಂದ ಪಟ್ಟಣ ಪಂಚಾಯಿತಿ ವಿದ್ಯುತ್ ನಿರ್ವಹಣೆ ಸಿಬ್ಬಂದಿಗಳಿಗೆ ವೇತನವೇ ನೀಡಿಲ್ಲಾ ಈ ಕಾರಣ ಕೆಲಸಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಅಂಶ ತಿಳಿದು ಬಂದಿದೆ.
ಇದರ ನಡುವೆ ಸರ್ಕಾರಿ ಆಸ್ಪತ್ರೆ ಹಗಲಲ್ಲೇ ಆಸ್ಪತ್ರೆ ಹೊರಗಿನ ದೀಪ ಉರಿಸುವ ಕ್ಷಣಗಳು ಸಹ ಪಬ್ಲಿಕ್ ನೆಕ್ಸ್ಟ್ ಕಂಡು ಬಂದವು ಒಟ್ಟಾರೆ ವಿದ್ಯುತ್ ಶಕ್ತಿ ಪೋಲಾಗುವುದರ ಬಗ್ಗೆ ತಾಲೂಕು ಆಡಳಿತ ಗಮನಿಸಬೇಕಿದೆ.
Kshetra Samachara
22/11/2021 03:00 pm