ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಪರಿಸ್ಥಿತಿ ಹೇಗೆ ಆಗಿದೆ ಅಂದರೆ ರಸ್ತೆ ಸರಿ ಇಲ್ಲ ಅಂತ ಹೊಸ ರಸ್ತೆ ನಿರ್ಮಾಣ ಮಾಡ್ತಾರೆ. ಆದರೆ ಮೊದಲಿಗಿಂತ ಹೆಚ್ಚಾಗಿ ಮತ್ತೊಂದು ಸಮಸ್ಯೆಯನ್ನು ಗಿಪ್ಟ್ ಕೊಟ್ಟು ಕಾಮಗಾರಿ ಪೂರ್ಣಗೊಳಿಸುತ್ತಾರೆ.
ವಾಣಿಜ್ಯನಗರಿ ಹುಬ್ಬಳ್ಳಿಯ ಹೊಸೂರ ಕೋರ್ಟ್ ಹತ್ತಿರದಲ್ಲಿ ಕಾಂಕ್ರೀಟ್ ರಸ್ತೆಯನ್ನು ನಿರ್ಮಾಣ ಮಾಡಿದ್ದಾರೆ. ಆದರೆ ರಸ್ತೆ ಮಧ್ಯದ ತಿರುವಿನಲ್ಲಿ ರಸ್ತೆ ಮಾಡದೆ ಬಿಟ್ಟಿದ್ದು, ದಿನವೂ ಬೈಕ್ ಸವಾರರು ಹಾಗೂ ಆಟೋ ಚಾಲಕರು ಪರದಾಡುವಂತಾಗಿದೆ. ಅಲ್ಲದೇ ದಿನಕ್ಕೆ ಒಂದೆರಡು ಜನ ಸವಾರರು ಬಿಳದೇ ಮನೆಗೆ ಹೋಗಲು ಸಾಧ್ಯವೇ ಇಲ್ಲ.
ನ್ಯಾಯಾಲಯದ ಹೊಸ ಕಟ್ಟಡದ ಹತ್ತಿರ ದಿನಕ್ಕೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯನ್ನು ಅರ್ಧಕ್ಕೆ ಬಿಟ್ಟಿದ್ದು, ಜನರು ಸಮಸ್ಯೆ ಅನುಭವಿಸುವಂತಾಗಿದೆ. ಇನ್ನೂ ರಾತ್ರಿ ವೇಳೆ ಬಂದರೇ ಮುಗಿತು. ಬೆನ್ನು ಮೂಳೆ ಮುರಿದುಕೊಂಡು ಮನೆಗೆ ಹೋಗುವುದಂತೂ ಖಂಡಿತ.
ಈ ಬಗ್ಗೆ ಹುಬ್ಬಳ್ಳಿಯ ವಕೀಲರ ಸಂಘ ಸಾಕಷ್ಟು ಬಾರಿ ಮನವಿ ಮಾಡಿದರು ಅಧಿಕಾರಗಳು ಮಾತ್ರ ಕಾಳಜಿ ತೋರುತ್ತಿಲ್ಲ.
Kshetra Samachara
20/11/2021 03:31 pm