ಕುಂದಗೋಳ : ನಮಸ್ಕಾರಿ ರೀ ಕುಂದಗೋಳ ಮಂದಿ ಮತ್ತೇನ್ರಿ ಹುಬ್ಬಳ್ಳಿ ಲಕ್ಷ್ಮೇಶ್ವರ ಶಿರೂರು ಬ್ರಿಡ್ಜ್ ವಿಚಾರ ಎಲ್ಲಿಗೆ ಬಂತು ? ಗೊತ್ತಿಲ್ಲಾ ಏನ್ರಿ, ನಿಮ್ಗ ಗೊತ್ತಿಲ್ಲಾ ಅಂದ್ರು ನಾವ್ ಹೇಳ್ತಿವಿ ಕೇಳ್ರಿ.
ಈ ಹುಬ್ಬಳ್ಳಿ ಲಕ್ಷ್ಮೇಶ್ವರ ಶಿರೂರು ಬ್ರಿಡ್ಜ್ ಕಾಮಗಾರಿ ಅಗ್ಗದಿ ಚೆಂದ ಮತ್ತ್ ಆರಾಮ ನಡೆದೇತಿ ನೋಡ್ರಿ, ಅದನ್ನ್ ನಾವ್ ಇವತ್ತ್ ರಿಯಾಲಿಟಿ ಚೆಕ್ ಮಾಡೇವಿ.
ಹೌದ ರೀ ! ಮೊದ್ಲ ಬ್ರಿಡ್ಜ್ ಬಿದ್ದಾಗ ಈ ಗುತ್ತಿಗೆದಾರರು ಸಪ್ಟೇಂಬರ್ ತಿಂಗಳ ಎರಡನೇ ವಾರದಲ್ಲಿ ಬಿಹಾರದ ಕಾರ್ಮಿಕರಿಂದ ಕೆಲ್ಸಾ ಆರಂಭ ಮಾಡ್ಸಿದ್ರೂ, ಅವ್ರು ಬಿಟ್ಟು ಹೋದ ಮೇಲೆ ಕುಂದಗೋಳ ತಾಲೂಕಿನ ಕೆಲವೇ ಕೆಲ ಕಾರ್ಮಿಕರು ಮಾತ್ರ ಕೆಲ್ಸಾ ನಡಸ್ಯಾರ್. ಆದ್ರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೇಳಿದ್ಹಂಗ ಬ್ರೀಡ್ಜ್ ನಿರ್ಮಾಣ ಕೆಲ್ಸಾ ಡಿಸೇಂಬರ್ ತಿಂಗಳಾದಾಗ ಮುಗಿಯಂಗಿಲ್ಲಾ.
ಐದು ಕೋಟಿ ಮೊತ್ತದಲ್ಲಿ ಆರಂಭವಾದ ಕಾಮಗಾರಿಗೆ ಬ್ರಿಡ್ಜ್'ಗೆ ಅಡ್ಡಗೋಡೆ ನಿರ್ಮಿಸಿ ಸಿಮೇಂಟ್ ಹಾಕುತ್ತಿರುವ ಸಿಬ್ಬಂದಿಗಳು ಮುಂದೆ ಬ್ರಿಡ್ಜ್ ಮೇಲಿನ ರಸ್ತೆ ಕ್ಲೋಸ್ ಮಾಡಿ ಕಾಮಗಾರಿ ಆರಂಭ ಮಾಡ್ಬೇಕಂತ ಸುಪರವೈಸರ್ ಹೇಳ್ಯಾರ.
ಈಗಾಗಲೇ ಬ್ರಿಡ್ಜ್ ಬಿದ್ದ ಪರಿಣಾಮ ಸಾರಿಗೆ ಸಮಸ್ಯೆ ಎದುರಿಸುತ್ತಿರುವ ಜನ ಮತ್ತಷ್ಟೂ ತಾಪತ್ರಯ ಒಳಗಾಗಬಹುದು, ಆಮ್ಯಾಲೆ ಶಾಲಾ ಕಾಲೇಜು ವಿದ್ಯಾರ್ಥಿನಿಯರಂತೂ ಈ ಪಾಟಿ ಉರಿಯುವ ಬಿಸಲಲ್ಲೇ ಬಸ್ ಕಾಯುವ ಪರಿಸ್ಥಿತಿಗೆ ಸಾರಿಗೆ ಅಧಿಕಾರಿಗಳು ಪರ್ಯಾಯ ಮಾರ್ಗ ಕಲ್ಪಿಸ್ರೀ ಬ್ರಿಡ್ಜ್ ಕಾಮಗಾರಿ ಇನ್ನೂ ಕನಿಷ್ಠ ನಾಲ್ಕು ತಿಂಗಳಾದ್ರೂ ಮುಂದುವರೆಯಬಹುದು.
Kshetra Samachara
16/11/2021 06:38 pm