ಹುಬ್ಬಳ್ಳಿ : ನಗರದ ಆನಂದ್ ನಗರದಲ್ಲಿ ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ, ಧಾರವಾಡ ಮತ್ತು ಕೆ ಎನ್ ಎಚ್- ಜರ್ಮನಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹೊಸ ಯೋಜನೆಯಾದ ಸಾಥಿ ಯೋಜನೆಯ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಸಂಯೋಜಕ ಬಸಲಿಂಗಪ್ಪ ನೀರಲಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯಲ್ಲಿರುವ ಯೋಜನೆಗಳ ಕುರಿತು ಮಾಹಿತಿ ನೀಡಿದರ ಜೊತೆಗೆ ಸಂಸ್ಥೆ ಮಕ್ಕಳಿಗೆ, ಮಹಿಳೆಯರಿಗೆ,ಯುವಕರಿಗೆ, ಕಿಶೋರಿಯರಿಗೆ, ರೈತರಿಗೆ ಮತ್ತು ಮಾಜಿ ದೇವದಾಸಿ ಮತ್ತು ಅವರ ಮಕ್ಕಳಿಗೆ ಅನೇಕ ಯೋಜನೆಗಳನ್ನು ರೂಪಿಸಿಕೊಂಡು ಉತ್ತರ ಕರ್ನಾಟಕದ ಆಯ್ದ 5 ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ವಿವರಿಸಿದರು.
ಇದೇ ವೇಳೆ ಸಂಸ್ಥೆಗೆ ಬಂದಿರುವ ಹೊಸ ಯೋಜನೆಯಾದ ಸಾಥಿ ಯೋಜನೆಯ ಕುರಿತು ತಿಳುವಳಿಕೆ ನೀಡಿದರು.
ವಂದನೀಯ ಫಾದರ್ ಪೀಟರ್ ಆಶೀರ್ವಾದ ಸಹ ನಿರ್ದೇಶಕರು ಬಿಡಿ ಎಸ್ ಎಸ್ ಸಂಸ್ಥೆ ಧಾರವಾಡ ಇವರು ಮಾತನಾಡಿ ಯೋಜನೆಯು ಹುಬ್ಬಳ್ಳಿಯ 5 ಕೊಳಚೆ ಪ್ರದೇಶ ಧಾರವಾಡದ, 5 ಕೊಳಚೆ ಪ್ರದೇಶ ಹಾಗೂ ಅಳ್ಳಾವರ ತಾಲೂಕಿನ ಐದು ಹಳ್ಳಿಗಳಲ್ಲಿ ಯೋಜನೆ ರೂಪಿಸಿಕೊಂಡು ಮುಂದಿನ ಐದು ವರ್ಷ ಮಕ್ಕಳ ಹಕ್ಕುಗಳು ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ನಗರ ಮತ್ತು ಹಳ್ಳಿಗಳ ಅಭಿವೃದ್ಧಿಗಾಗಿ ಯೋಜನೆಯನ್ನು ರೂಪಿಸಿಕೊಂಡು ಬಂದಿದ್ದು ಇದಕ್ಕೆ ಎಲ್ಲರ ಸಹಕಾರದ ಅವಶ್ಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಆನಂದ್ ನಗರದ ಮುಖಂಡ ರಾಜು ಗೋಕಾಕ್ (ಅಧ್ಯಕ್ಷರು ಹಿಂದು ಕ್ರಿಯಾ ಸಮಿತಿ), ಮಲ್ಲೇಶಪ್ಪ ವಾಲ್ಮೀಕಿ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮುರಿಗೆಪ್ಪ ಹೊರಡಿ, ಮಹೇಶ್ ಪಾಟೀಲ್, P H ಹಳಿಯಾಳ (ಸಿಆರ್ ಪಿ) ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Kshetra Samachara
11/11/2021 08:59 pm