ನವಲಗುಂದ : ಪಟ್ಟಣದ ಐತಿಹಾಸಿಕ ಬಾವಿಗಳಲ್ಲಿ ಒಂದಾದ ಸಂಕವ್ವನ ಬಾವಿಯ ಉದ್ಯಾನವನ ಈಗ ಪಾಳು ಬಿದಿದೆ. ಕಾಪೌಂಡ್ ಗೋಡೆಗಳು ಉರುಳುವ ಪರಿಸ್ಥಿತಿಗೆ ಬಂದಿದೆ. ಇನ್ನು ಗೇಟ್ ಅಂತೂ ಈಗಾಗಲೇ ಮುರಿದಿದೆ. ಅಷ್ಟೇ ಅಲ್ಲದೆ ಇಲ್ಲಿ ಪುಂಡರ ಹಾವಳಿ ಕೂಡ ಹೆಚ್ಚಿದೆ. ಇದರಿಂದ ಸ್ಥಳೀಯರಿಗೂ ಸಾಕಷ್ಟು ಸಮಸ್ಯೆ ಬಂದೋದಾಗಿದೆ.
ಹೌದು ನವಲಗುಂದ ಪಟ್ಟಣದ ನೀರಾವರಿ ಕಾಲೋನಿ ಬಳಿ ಇರುವ ಸಂಕವ್ವನ ಬಾವಿಗೆ ಐತಿಹಾಸಿಕ ಹಿನ್ನೆಲೆ ಇದೆ. ಪೂಜೆಗಾಗಿ ನಾಗಲಿಂಗಜ್ಜನವರು ಗವಿ ಮುಖಾಂತರ ಬಾವಿಗೆ ನೀರು ತರಲು ಬರುತ್ತಿದ್ದರು ಎಂಬ ಮಾತುಗಳು ಸಹ ಇವೆ. ಇಂತಹ ಬಾವಿಯ ನಿರ್ವಹಣೆ ಕೊರತೆ ಈಗ ಎದ್ದು ಕಾಣುತ್ತಿದೆ. ಇತ್ತೀಚೆಗೆ ಈ ಬಾವಿಯ ಸುತ್ತ ಉದ್ಯಾನವನ ನಿರ್ಮಿಸಲಾಗಿದೆ. ಆದರೆ ಈಗ ಅದು ನಿರ್ವಹಣೆ ಇಲ್ಲದೆ ಸಂಪೂರ್ಣ ಪಾಳು ಬಿದಿದೆ. ಉದ್ಯಾನವನದಲ್ಲಿ ಗಿಡ ಗಂಟಿಗಳು ಬೆಳೆದಿದ್ದು, ಸ್ಥಳೀಯರಿಗೆ ಹುಳು ಹುಪ್ಪಡಿಗಳ ಆತಂಕ ಸಹ ಹೆಚ್ಚಿದಂತಿದೆ. ಇಲ್ಲಿ ಕೂರಲು ಸಹಿತ ಆಗದ ವಾತಾವರಣ ಸೃಷ್ಟಿಯಾಗಿದೆ. ಗೇಟ್ ಕಳಚಿ ಬಿಳ್ಳುವ ಪರಿಸ್ಥಿತಿಗೆ ಬಂದು ನಿಂತಿದೆ.
ಇನ್ನು ಇಲ್ಲಿ ಗಣಪತಿ ವಿಸರ್ಜನೆ ಸಹ ಮಾಡಲಾಗುತ್ತಂತೆ, ಇಂತಹ ಪರಿಸ್ಥಿತಿಯಲ್ಲಿ ಅವಘಡ ಸಂಭವಿಸಿದರೆ ಹೊಣೆ ಯಾರು ಆಲ್ವಾ..? ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸಂಬಂಧ ಪಟ್ಟ ಪುರಸಭೆಯ ಮುಖ್ಯಾಧಿಕಾರಿಗಳಾದ ವಿರೇಶ ಹಸಬಿ ಅವರ ಗಮನಕ್ಕೆ ತಂದಾಗ ಈ ಉದ್ಯಾನವನದ ನಿರ್ವಹಣೆ ಮಾಡುವುದಾಗಿ ಅವರು ತಿಳಿಸಿದ್ದಾರೆ. ಒಟ್ಟಾರೆ ಈ ಐತಿಹಾಸಿಕ ಬಾವಿಯ ನಿರ್ವಹಣೆ ಮಾಡಬೇಕು ಮತ್ತು ಸ್ಥಳೀಯರಿಗೆ ಒಳ್ಳೆಯ ವಾತಾವರಣ ನೀಡಬೇಕು ಎಂಬುದು ಪಬ್ಲಿಕ್ ನೆಕ್ಸ್ಟ್ ನ ಆಶಯ...
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
10/11/2021 01:42 pm